ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಸಂಸದ ಪ್ರತಾಪ್ ಸಿಂಹ ಅವರ ಬಳಿ ಕೊಡಗು ಆಸ್ಪತ್ರೆ ಅಭಿಯಾನದ ಬಗ್ಗೆ ಮಾಹಿತಿ ಕೇಳಿದ್ದಾರೆ.
ರಶ್ಮಿಕಾ ಅವರು ತಮ್ಮ ಟ್ವಿಟ್ಟರಿನಲ್ಲಿ, “ಪ್ರತಾಪ್ ಸಿಂಹ ಸರ್ ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ನಾನು ಟ್ವೀಟ್ ಮಾಡುತ್ತಿದ್ದೇನೆ. ದಯವಿಟ್ಟು ನನಗೆ ಮಾಹಿತಿ ಸಿಗಬಹುದೇ?. ಈ ಬಗ್ಗೆ ಅಭಿವೃದ್ಧಿ ಅಥವಾ ಬೇರೆ ಯಾವುದೇ ಮಾಹಿತಿ ನಮಗೆ ತಿಳಿಸಿದರೆ ಸಂತೋಷವಾಗುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
Advertisement
Sir @mepratap or #KarnatakaGovernment this tweet is regarding the multi speciality hospital in Coorg. Can we get updates on it please? Would be glad if we get any information regarding the developments or the updates ????
— Rashmika Mandanna (@iamRashmika) September 17, 2019
Advertisement
ಈ ಹಿಂದೆ ರಶ್ಮಿಕಾ ಅವರು, ತುಂಬಾ ಮುಖ್ಯವಾಗಿ ಬೇಕಾಗಿರುವುದು ಅಂದರೆ ಅದು ಆಸ್ಪತ್ರೆ ಹಾಗೂ ನಮ್ಮ ಕೂರ್ಗ್ ನಲ್ಲಿ ಆಸ್ಪತ್ರೆ ಇಲ್ಲ. ಒಳ್ಳೆಯ ಆಸ್ಪತ್ರೆಗಾಗಿ ನಾವು ದೂರ ಪ್ರಯಾಣಿಸಬೇಕು. ಅದರ ಬದಲು ಕೊಡಗಿನಲ್ಲಿ ಆಸ್ಪತ್ರೆ ಇದ್ದರೆ ಜನರಿಗೆ ತುಂಬಾನೇ ಸಹಾಯವಾಗುತ್ತದೆ. ದಯವಿಟ್ಟು ಸ್ಪಂದಿಸಿ ಎಂದು ಸಿಎಂಗೆ ಟ್ಯಾಗ್ ಮಾಡಿ #WeNeedEmergencyHospitalInKodagu ಹ್ಯಾಶ್ ಟ್ಯಾಗ್ ಬಳಸಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದರು.
Advertisement
One of the most basic necessities is a hospital and in Coorg we don't have it. For a good hospital we have to travel distances. It would be really helpful for the people of Kodagu if this could be done to us
ದಯವಿಟ್ಟು ಸ್ಪಂದಿಸಿ ????@CMofKarnataka#WeNeedEmergencyHospitalInKodagu
— Rashmika Mandanna (@iamRashmika) June 13, 2019
Advertisement
ರಶ್ಮಿಕಾ ಅವರ ಟ್ವೀಟ್‍ಗೆ ಪ್ರತಾಪ್ ಸಿಂಹ ಅವರು, ಕೊಡಗು ಆಸ್ಪತ್ರೆ ಅಭಿಯಾನ ಕುರಿತಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲ್ಲೂ ಮನವಿ ಪತ್ರವನ್ನು ಬರೆದಿದ್ದೇನೆ. ಅಷ್ಟೇ ಅಲ್ಲದೇ ಈ ಅಭಿಯಾನಕ್ಕೆ ಮೋದಿಜೀ ಸರ್ಕಾರ ಕೂಡ ಸಂಪೂರ್ಣ ಸಹಕಾರ ನೀಡುತ್ತದೆಂಬ ಭರವಸೆಯನ್ನು ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಪ್ರತಾಪ್ ಅವರ ಟ್ವೀಟ್‍ಗೆ ರಶ್ಮಿಕಾ, ನಮ್ಮ ಮನವಿಯನ್ನು ಇಷ್ಟು ಬೇಗ ಪರಿಗಣಿಸಿದ್ದಕ್ಕೆ ಧನ್ಯವಾದಗಳು ಸರ್. ಇದು ನಮಗೆ ತುಂಬಾ ಮುಖ್ಯವೆನಿಸುತ್ತದೆ ಎಂದು ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದರು.
Thank you for considering the request at your earliest @mepratap sir. This means a lot to us. https://t.co/Sn6EcXL60y
— Rashmika Mandanna (@iamRashmika) June 14, 2019
ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ #WeNeedEmergencyHospitalInKodagu ಅಭಿಯಾನವನ್ನು ಕೊಡಗಿನ ಜನತೆ ಆರಂಭಿಸಿದ್ದರು. ಕೊಡಗಿನಲ್ಲಿ ಐಷಾರಾಮಿ ರೆಸಾರ್ಟ್, ಹೋಮ್ಸ್ ಸ್ಟೇ ಇದೆ. ಆದರೆ ಸುಸಜ್ಜಿತ ಆಸ್ಪತ್ರೆ ಇಲ್ಲ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ಮೂಲಕ ಸರ್ಕಾರದ ಗಮನ ಸೆಳೆಯಲು ಕೊಡಗಿನ ಮಂದಿ ನಿರ್ಧರಿಸಿದ್ದರು. ಕೊಡಗಿನ ಜನತೆಯ ಅಭಿಯಾನಕ್ಕೆ ರಶ್ಮಿಕಾ ಮಾತ್ರವಲ್ಲದೇ ಕಿಚ್ಚ ಸುದೀಪ್, ಶಿವಣ್ಣ, ಹರ್ಷಿಕಾ ಪೂಣಚ್ಚ ಕೂಡ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು.