ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರು ವಿಚಾರಣೆ ಎದುರಿಸಿದ್ದಾರೆ.
ಪ್ರೋಟೋಕಾಲ್ ದುರ್ಬಳಕೆ ಕುರಿತು ತನಿಖೆ ಕೈಗೊಂಡಿರುವ ಗೌರವ್ ಗುಪ್ತ ತಂಡವು ರಾಮಚಂದ್ರ ರಾವ್ ಅವರನ್ನು ಇಂದು ಶಕ್ತಿ ಭವನದಲ್ಲಿ ವಿಚಾರಣೆಗೊಳಪಡಿಸಿತು. ವಿಚಾರಣೆ ವೇಳೆ ಐಪಿಎಸ್ ಅಧಿಕಾರಿಯ ಹೇಳಿಕೆಗಳನ್ನು ತನಿಖಾ ತಂಡ ದಾಖಲಿಸಿಕೊಂಡಿದೆ.
ಈಗಾಗಲೇ 10 ಕ್ಕೂ ಹೆಚ್ಚು ಜನರ ವಿಚಾರಣೆಯನ್ನು ತಂಡ ನಡೆಸಿದೆ. ಇಂದು ರಾಮಚಂದ್ರ ರಾವ್ ಹೇಳಿಕೆ ದಾಖಲಿಸಿಕೊಂಡಿದೆ. ರನ್ಯಾರಾವ್‌ಗೆ ಪ್ರೋಟೋಕಾಲ್ ನೀಡಿದ್ದರ ಬಗ್ಗೆ ಹೇಳಿಕೆ ದಾಖಲು ಮಾಡಿದೆ.
ಸಂಜೆ ಆರು ಗಂಟೆಗೆ ವಿಚಾರಣೆಗೆ ರಾಮಚಂದ್ರ ರಾವ್ ಅವರು ವಿಚಾರಣೆಗೆ ಹಾಜರಾಗಿದ್ದರು. ಸತತ ಮೂರು ಗಂಟೆ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.
ಐಎಎಸ್ ಅಧಿಕಾರಿ ಗೌರವ್ ಗುಪ್ತ, ಡಿಐಜಿ ವಂಶಿ ಕೃಷ್ಣ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ. ಪ್ರಕರಣ ಸಂಬಂಧ ಬುಧವಾರ ತನಿಖಾ ವರದಿಯನ್ನು ಸಲ್ಲಿಸಬೇಕಿದೆ.