ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ನಟಿ ರನ್ಯಾ ರಾವ್‌ಗೆ ಮಾರ್ಚ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಕೋರ್ಟ್ (Court) ಆದೇಶಕ್ಕೂ ಮುನ್ನ ನಟಿಯನ್ನು ತೀವ್ರವಾಗಿ ವಿಚಾರಣೆ ನಡೆಸಲಾಯಿತು. ಈ ವೇಳೆ ಜಡ್ಜ್ ಮುಂದೆ ನಟಿ ಕಣ್ಣೀರಿಟ್ಟು ಗೋಳಾಡಿದರು.
ಡಿಆರ್‌ಐ ಸರಣಿ ಪ್ರಶ್ನೆಗಳಿಗೆ ತತ್ತರಿಸಿರುವ ನಟಿ ರನ್ಯಾ ರಾವ್ (Ranya Rao) ಮಾತು ಮಾತಿಗೂ ಕಣ್ಣೀರು ಇಡ್ತಿದ್ದಾರಂತೆ.. ಏನೇ ಪ್ರಶ್ನೆ ಕೇಳಿದ್ರೂ ಸರಿಯಾಗಿ ಉತ್ತರ ಕೊಡದ ರನ್ಯಾರಾವ್, ನನ್ನನ್ನು ಈ ಕೇಸ್ ನಲ್ಲಿ ಸಿಲುಕಿಸಲಾಗಿದೆ. ಈ ಹಿಂದೆ ಯಾವತ್ತೂ ಚಿನ್ನ ಸಾಗಟ ಮಾಡಿಲ್ಲ.. ನಂಗೇನು ಗೊತ್ತಿಲ್ಲ ಅಂತಷ್ಟೇ ಹೇಳ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ತೊಂದ್ರೆ ಕೊಡ್ತಿದ್ದಾರಾ? ಹಿಲ್ ಟ್ರೀಟ್ಮೆಂಟ್ ಕೊಟ್ಟಿದ್ದಾರಾ..? ಎಂದು ಜಡ್ಜ್ ಕೇಳಿದ್ದಕ್ಕೆ ಕಣ್ಣೀರಿಡುತ್ತಲೇ ಉತ್ತರಿಸಿದ ರನ್ಯಾ, ಮಾನಸಿಕವಾಗಿ ಬಹಳ ಹಿಂಸೆ ನೀಡಿದ್ದಾರೆ. ನಿನಗೆ ಇದ್ರಿಂದ ಏನಾಗುತ್ತೆ ಗೊತ್ತಾ ಅಂತ ಭಯ ಬೀಳಿಸಿದ್ದಾರೆ. ಸತ್ಯ ಒಪ್ಪಿಕೋ ಅಂತ ಹೆದರಿಸುತ್ತಿದ್ದಾರೆ. ತಲೆಗೆ ಸುತ್ತಿಗೆಯಲ್ಲಿ ಹೊಡೆದಂತೆ ಪ್ರಶ್ನೆ ಕೇಳ್ತಾರೆ, ಕೆಟ್ಟದಾಗಿ ಬೈಯ್ದಿದ್ದಾರೆ, ನಾನು ಏನು ಮಾಡಿಲ್ಲ ಅಂದ್ರು ಹಿಂಸೆ ಕೊಡ್ತಿದ್ದಾರೆ ಎಂದು ಗಳಗಳನೆ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ನಾನು ಇದ್ರಿಂದ ಭಾವನಾತ್ಮಕವಾಗಿ ಕುಗ್ಗಿಹೋಗಿದ್ದೇನೆ ಎಂದು ಕೈ ಮುಗಿದು ಜಡ್ಜ್ ಮುಂದೆ ಬೇಡಿಕೊಂಡಿದ್ದಾರೆ.
ಇಂದು ಕಸ್ಟಡಿ ಅವಧಿ ಮುಗಿದ ಕಾರಣ ಆಕೆಯನ್ನು ಕೋರ್ಟ್ ಮುಂದೆ ಡಿಆರ್‌ಐ ಅಧಿಕಾರಿಗಳು ಹಾಜರುಪಡಿಸಿದ್ರು. ಈ ವೇಳೆ, ನನಗೆ ಟಾರ್ಚರ್ ಕೊಡ್ತಿದ್ದಾರೆ ಎಂದು ರನ್ಯಾ ಕಣ್ಣೀರಿಟ್ರು.. ಆದ್ರೆ, ಇದನ್ನು ತನಿಖಾಧಿಕಾರಿಗಳು ಅಲ್ಲಗಳೆದ್ರು. ಪ್ರಶ್ನೆ ಕೇಳೋದು ಕಿರುಕುಳ ಹೇಗಾಗುತ್ತೆ ಎಂದು ಪ್ರಶ್ನೆ ಮಾಡಿದ್ರು. ಕಡೆಗೆ, ರನ್ಯಾ ತನಿಖೆಗೆ ಅಸಹಕಾರ ಕೊಡ್ತಿದ್ದಾರೆ ಎಂದು ತೀರ್ಮಾನಿಸಿದ ನ್ಯಾಯಾಧೀಶರು, ಆಕೆಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ರು.
ರನ್ಯಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಡಿಆರ್‌ಐಗೆ ಸೂಚಿಸಿದ್ರು. ಈ ನಡ್ವೆ, ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಸ್ಟಾರ್ ಹೋಟೆಲ್ ಮಾಲಿಕರೊಬ್ಬರ ಮೊಮ್ಮಗ ತರುಣ್‌ರಾಜ್‌ನನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದು, ಐದು ದಿನ ಕಸ್ಟಡಿಗೆ ಪಡೆದಿದ್ದಾರೆ. ಈತ ರನ್ಯಾ ರಾವ್‌ಗೆ ತರುಣ್ ಗೆಳೆಯ ಎನ್ನಲಾಗಿದೆ.