– ವಿಚಾರಣೆ ವೇಳೆ ಡಿಆರ್‌ಐ ಅಧಿಕಾರಿಗಳ ಮುಂದೆ ನಟಿ ಹೇಳಿದ್ದೇನು?
ಬೆಂಗಳೂರು: ನನ್ನನ್ನು ಎಲ್ಲರೂ ಸೇರಿ ಟ್ರ್ಯಾಪ್ ಮಾಡಿದ್ರು. ನಾನು ಅವರ ಟ್ರ್ಯಾಪ್‌ಗೆ ಬಿದ್ದು ಈ ರೀತಿ ಕೆಲಸ ಮಾಡಿದ್ದೇನೆ ಎಂದು ಅಧಿಕಾರಿಗಳ ಮುಂದೆ ಆರೋಪಿ, ನಟಿ ರನ್ಯಾ ರಾವ್ ಅಳಲು ತೋಡಿಕೊಂಡಿದ್ದಾರೆ.
Advertisement
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ಅವರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 14.2 ಕೆಜಿ ಚಿನ್ನದ ಗಟ್ಟಿ ಕಳ್ಳ ಸಾಗಣೆ ಮಾಡಲು ಹೋಗಿ ಸಿಕ್ಕಿಬಿದ್ದಿರುವ ನಟಿ ತನ್ನ ಸಂಕಷ್ಟ ಹೇಳಿಕೊಂಡಿದ್ದಾರೆ.
Advertisement
ಒಂದಷ್ಟು ಜನ ಸೇರಿ ನನ್ನನ್ನ ಟ್ರ್ಯಾಫ್ ಮಾಡಿದ್ದಾರೆ. ಹಾಗಾಗಿಯೇ ನಾನು ಈ ಕೆಲಸ ಮಾಡಿದ್ದೀನಿ ಅಂತ ರನ್ಯಾ ಹೇಳಿಕೊಂಡಿದ್ದಾಳೆ. ಹಾಗಾದರೆ, ನಟಿ ಯಾವ ಟ್ರ್ಯಾಪ್‌ಗೆ ಒಳಗಾದರು? ಟ್ರ್ಯಾಪ್ ಮಾಡಿದ್ದು ಯಾರು? ಯಾಕಾಗಿ ಟ್ರ್ಯಾಫ್ ಮಾಡಿದ್ರು ಎಂಬ ಪ್ರಶ್ನೆಗಳನ್ನು ಡಿಆರ್‌ಐ ಅಧಿಕಾರಿಗಳು ನಟಿ ಮುಂದಿಟ್ಟಿದ್ದಾರೆ. ಆದರೆ, ಉತ್ತರ ನೀಡಲು ನಟಿ ನಕಾರ ಮಾಡಿದ್ದಾರೆ.
Advertisement
ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಮೊಬೈಲ್ ವಶಕ್ಕೆ ಪಡೆದಿದ್ದು, ಸಾಕಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.
Advertisement
ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ಬಂಧನಕ್ಕೆ ಒಳಗಾಗಿದ್ದಾರೆ. ಚಿನ್ನದ ಗಟ್ಟಿಯನ್ನು ತೊಡೆಯಲ್ಲಿ ಅಂಟಿಸಿಕೊಂಡು ನಟಿ ಸಾಗಿಸುತ್ತಿದ್ದರು. ದುಬೈನಿಂದ ಹೊರಟಿದ್ದ ನಟಿಯನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.