‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್ (Ranjani Raghavan) ಇಂದು ಜೀವನ ಸಂಗಾತಿಯನ್ನು ಪರಿಚಯಿಸಿದ್ದಾರೆ. ಬಹುಕಾಲದ ಗೆಳೆಯನ ಬಗ್ಗೆ ನಟಿ ರಿಯಾಕ್ಟ್ ಮಾಡಿದ್ದಾರೆ. ಹಾಗಾದ್ರೆ ನಟಿಯ ಲೈಫ್ ಪಾರ್ಟ್ನರ್ ಯಾರು? ಏನ್ಮಾಡ್ತಾರೆ ಎಂಬುದರ ಬಗ್ಗೆ ರಂಜನಿ ‘ಪಬ್ಲಿಕ್ ಟಿವಿ’ ಡಿಜಿಟಲ್‌ಗೆ ಎಕ್ಸ್‌ಕ್ಲೂಸಿವ್ ಆಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬ್ಯಾಕ್‌ಲೆಸ್ ಬ್ಲೌಸ್ ಜೊತೆ ಸೀರೆಯುಟ್ಟು ಮಿಂಚಿದ ‘ಉಪಾಧ್ಯಕ್ಷ’ ನಟಿ
ನನ್ನ ಹುಡುಗ ಸಾಗರ್ ಭಾರಧ್ವಜ್ (Sagar Bharadwaj) ನನ್ನ ಪಿಯುಸಿ ಕ್ಲಾಸ್‌ಮೇಟ್. ಜೀವನದಲ್ಲಿ ನನ್ನ ಏಳು- ಬೀಳುಗಳನ್ನು ನೋಡುತ್ತಾ ಬಂದಿದ್ದಾರೆ. ನನ್ನ ಅರ್ಥ ಮಾಡಿಕೊಂಡಿದ್ದಾರೆ. ನನ್ನ ಕೆಲಸ ಕಾರ್ಯಗಳ ಬಗ್ಗೆ ಅವರಿಗೆ ಗೊತ್ತಿದೆ. ಅವರು ಇಂಟರ್‌ನ್ಯಾಷನಲ್ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಹವ್ಯಾಸವಾಗಿ ಸೈಕ್ಲಿಂಗ್, ಟ್ರಾವೆಲಿಂಗ್ ಮಾಡುತ್ತಾರೆ. ಒಳ್ಳೆಯ ವ್ಯಕ್ತಿ, ಸೆಲೆಬ್ರಿಟಿ ಹೊರತಾಗಿ ರಂಜನಿ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ. ಬೆಸ್ಟ್ ಫ್ರೆಂಡ್ಸ್ ಅಂತ ಇರುವವರೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನಾಗಿರುತ್ತೆ. ನಾನು ಹೇಳಿದ ಹಾಗೆ ನನ್ನ ಜೀವನ ಚೆನ್ನಾಗಿದೆ ಎಂದು ನಟಿ ಮಾತನಾಡಿದ್ದಾರೆ.
ಪ್ರೀತಿ ಅಂದರೆ ಅದೊಂದು ಕಮಿಟ್‌ಮೆಂಟ್ ಎಂದಿದ್ದಾರೆ. ಇವತ್ತು ಪ್ರೀತಿ ಮಾಡಿ ನಾಳೆ ಕೋಪ ಮಾಡಿಕೊಂಡು ಬದಲಾಗೋದು ಪ್ರೇಮ ಅಲ್ಲ. ಅವರು ಹೇಗೆ ಇರುತ್ತಾರೆ ಹಾಗೆ ಒಪ್ಪಿಕೊಂಡು ಮುಂದೆ ಹೋಗೋದೇ ಕಮಿಟ್‌ಮೆಂಟ್ ಎಂದು ಲವ್ ಲೈಫ್ ಬಗ್ಗೆ ರಂಜನಿ ಮಾತನಾಡಿದ್ದಾರೆ.
ಹಲವು ವರ್ಷಗಳ ಸ್ನೇಹವನ್ನು ಇಂದು ಅಧಿಕೃತಪಡಿಸಿರುವ ರಂಜನಿ, ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ. ಹಾಗಾಗಿ 2 ವರ್ಷಗಳ ಕಾಲ ಮದುವೆಯ (Wedding) ಬಗ್ಗೆ ಆಲೋಚನೆ ಮಾಡಿಲ್ಲ. ಆದರೆ ನಮ್ಮ ಎರಡು ಕುಟುಂಬದ ಕಡೆಯಿಂದಲೂ ಮದುವೆಗೆ ಸಮ್ಮತಿ ಇದೆ. ಮೊದಲಿಂದಲೂ ನಮ್ಮಿಬ್ಬರ ಬಗ್ಗೆ ಫ್ಯಾಮಿಲಿಯಲ್ಲಿ ಗೊತ್ತಿತ್ತು. ನನ್ನ ವೃತ್ತಿಗೆ ಸಾಗರ್ ಅವರ ಕುಟುಂಬದಿಂದಲೂ ಬೆಂಬಲವಿದೆ ಎಂದಿದ್ದಾರೆ.
ಇನ್ನೂ ನಟಿಯ ಪಾರ್ಟ್ನರ್ ಕುರಿತು ರಿವೀಲ್ ಮಾಡಿದ ಬೆನ್ನಲ್ಲೇ ರಂಜನಿ ಅವರ ಇತ್ತೀಚಿನ ಹೇಳಿಕೆಯೊಂದು ಭಾರೀ ಸದ್ದು ಮಾಡುತ್ತಿದೆ. ಬೆಸ್ಟ್ ಫ್ರೆಂಡ್ಸ್ ಅಂತ ಇರುವವರೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನಾಗಿರುತ್ತೆ. ನಮಗೆ ಯಾರಾದ್ರು ಬೆಸ್ಟ್ ಫ್ರೆಂಡ್ಸ್ ಇದ್ರೆ ನಮ್ಮ ಬಗ್ಗೆ ಎಲ್ಲಾ ತಿಳಿದುಕೊಂಡಿರುತ್ತಾರೆ. ನಮಗೆ ಬೇಸಿಕ್ ಬೇಕಾಗಿರೋದು ಫ್ರೆಂಡ್‌ಶಿಪ್ ಮತ್ತು ಒಡನಾಟ ಮಿಕ್ಕಿದೆಲ್ಲಾ ನಂತರ ಅಡ್ಜೆಸ್ಟ್ ಮಾಡಿಕೊಳ್ಳಬಹುದು ಆ ತರ ಇದ್ದರೆ ಚೆನ್ನಾಗಿರುತ್ತೆ ಎಂದು ರಂಜನಿ ಹೇಳಿದ್ದರು. ಅದರಂತೆ ತಮ್ಮ ಬೆಸ್ಟ್ ಫ್ರೆಂಡ್ ಸಾಗರ್ ಅವರನ್ನು ಲೈಫ್ ಪಾರ್ಟ್ನರ್ ಆಗಿ ಸ್ವೀಕರಿಸಿದ್ದಾರೆ.