ಬೆಂಗಳೂರು: ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ರಂಜನಿ ರಾಘವನ್ ಅವರು ಸರಳ ಸ್ವಭಾವವುಳ್ಳವರು, ಚೆಂದುಳ್ಳಿ ಚೆಲುವೆ, ಟ್ರೆಡಿಶನ್ ಲುಕ್‍ಗೆ ಹೇಳಿ ಮಾಡಿಸಿದ ನಟಿ. ಆದರೆ ಈ ನಟಿ ಮಾಡರ್ನ್ ಲುಕ್‍ನಲ್ಲಿಯೂ ಸಖತ್ ಆಗಿಯೇ ಕಾಣುತ್ತಾರೆ ಎನ್ನುವುದಕ್ಕೆ ಬೆಸ್ಟ್ ಎಕ್ಸಾಂಪಲ್ ಇತ್ತೀಚೆಗೆ ಮಾಡಿಸಿರುವ ಫೋಟೋಶೂಟ್ ಆಗಿದೆ.
ಹೌದು, ರಂಜನಿ ರಾಘವನ್ ಎಂದರೆ ನೆನಪಿಗೆ ಬರುವುದೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ. ಈ ಸೀರಿಯಲ್ ಮೂಲಕವಾಗಿ ಕಿರುತೆರೆಗೆ ಎಂಟ್ರಿಕೊಟ್ಟು ತಮ್ಮದೇ ಆಗಿರುವ ನಟನಾ ಶೈಲಿಯ ಮೂಲಕವಾಗಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕೆಲವು ಮನೆಯಲ್ಲಿ ಪ್ರತಿನಿತ್ಯ ಮನೆಗೆ ಬರುವ ಮನೆ ಮಗಳಾಗಿದ್ದಾರೆ. ಇವರ ನಟನೆ, ಸರಳತೆಯನ್ನು ಹೆಚ್ಚಿನ ಅಭಿಮಾನಿಗಳು ಇಷ್ಟಪಡುತ್ತಾರೆ. ಈ ನಟಿ ತಾನು ಸಾಂಪ್ರದಾಯಿಕ ಉಡುಗೆಯಷ್ಟೆ, ಮಾಡರ್ನ್ ಡ್ರೆಸ್‍ನಲ್ಲೂ ಅಷ್ಟೇ ಸುಂದರವಾಗಿ ಕಾಣುತ್ತೇನೆ ಎನ್ನುವಂತೆ ಒಂದು ಫೋಟೋಶೂಟ್ ಮಾಡಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ
View this post on Instagram
ಹೊಸ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು, ಮಹಿಳಾ ದಿನದ ಶುಭಾಶಯಗಳು ಆಲ್ ಮೈ ಲವ್ಲಿ ಲೇಡೀಸ್ ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಟ್ರೆಡಿಶನ್ ಔಟ್ ಫಿಟ್‍ನಲ್ಲೇ ಕಾಣಿಸಿಕೊಳ್ಳುವ ರಂಜನಿ ರಾಘವನ್ ಅವರು ಹೊಸ ಲುಕ್‍ನಲ್ಲಿ, ಸಖತ್ ಮಾಡರ್ನ್ ಸ್ಟೈಲ್‍ನಲ್ಲಿ ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋವನ್ನು ಮಹಿಳಾ ದಿನಾಚರಣೆಯ ದಿನದ ಅಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ರಂಜನಿ ಅವರ ಸ್ಟೈಲ್‍ಗೆ ಫಿದಾ ಆಗಿರುವುದಾಗಿ ತಿಳಿಸುತ್ತಿದ್ದಾರೆ.
ನೀಲಿ ಮತ್ತು ಕಪ್ಪು ಬಣ್ಣವಿರುವ ವೆಸ್ಟರ್ನ್ ಡ್ರೆಸ್ ತೊಟ್ಟಿದ್ದಾರೆ. ರಂಜನಿ ಅವರು ಡ್ರೆಸ್, ಹೇರ್‌ಸ್ಟೈಲ್ ಚೇಂಜ್ ಮಾಡಿಕೊಂಡಿದ್ದಾರೆ. ಕಂಪ್ಲೀಟ್ ಡಿಫರೆಂಟ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.