ನಟಿ, ಯುವ ನಿರ್ದೇಶಕಿ ರಂಜನಿ ರಾಘವನ್ (Ranjani Raghavan) ಅವರು ಗೆಳೆಯ ಸಾಗರ್ ಭಾರಧ್ವಾಜ್ (Sagar Bharadwaj) ಜೊತೆ ಲಾಂಗ್ ಡ್ರೈವ್‌ಗೆ ತೆರಳಿದ್ದಾರೆ. ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ ಗೆಳೆಯನ ಜೊತೆ ಸುತ್ತಾಟ ನಡೆಸಿದ್ದಾರೆ. ಇಬ್ಬರ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ; ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗ್ತೀರಿ: ಹಂಸಲೇಖ
ಬರವಣಿಗೆ, ನಿರ್ದೇಶನ ಅಂತ ಬ್ಯುಸಿಯಿರುವ ನಟಿ ರಂಜನಿ, ಇದೀಗ ಗೆಳೆಯನೊಂದಿಗೆ ವೆಕೇಷನ್‌ಗೆ ತೆರಳಿದ್ದಾರೆ. ಬೆಟ್ಟಗಳ ವ್ಯೂ ಎಂಜಾಯ್ ಮಾಡಿದ್ದು, ಲಾಂಗ್ ಡ್ರೈವ್, ಬೋಟಿಂಗ್ ಅಂತ ಸಮಯ ಕಳೆದಿದ್ದಾರೆ. ಮದುವೆಯಾಗುವ ಹುಡುಗ ಜೊತೆಯಿರುವ ಫೋಟೋ ಶೇರ್ ಮಾಡಿ ಲೈಫು, ರೀಸೆಂಟ್ಲಿ, ಲೈಫ್ ಪಾರ್ಟ್ನರ್, ನನ್ನ ಹುಡುಗ ಎಂದು ಅಡಿಬರಹ ನೀಡಿದ್ದಾರೆ. ಇದನ್ನೂ ಓದಿ:ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ
ಕೆಲ ತಿಂಗಳು ಹಿಂದೆ ಎಂಗೇಜ್ ಆಗಿರೋದಾಗಿ ನಟಿ ರಿವೀಲ್ ಮಾಡಿದ್ದರು. ನನ್ನ ಹುಡುಗ ಸಾಗರ್ ಭಾರಧ್ವಾಜ್ ನನ್ನ ಪಿಯುಸಿ ಕ್ಲಾಸ್‌ಮೇಟ್. ಜೀವನದಲ್ಲಿ ನನ್ನ ಏಳು- ಬೀಳುಗಳನ್ನು ನೋಡುತ್ತಾ ಬಂದಿದ್ದಾರೆ. ನನ್ನ ಅರ್ಥ ಮಾಡಿಕೊಂಡಿದ್ದಾರೆ. ನನ್ನ ಕೆಲಸ ಕಾರ್ಯಗಳ ಬಗ್ಗೆ ಅವರಿಗೆ ಗೊತ್ತಿದೆ. ಅವರು ಇಂಟರ್‌ನ್ಯಾಷನಲ್ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಹವ್ಯಾಸವಾಗಿ ಸೈಕ್ಲಿಂಗ್, ಟ್ರಾವೆಲಿಂಗ್ ಮಾಡುತ್ತಾರೆ. ಒಳ್ಳೆಯ ವ್ಯಕ್ತಿ, ಸೆಲೆಬ್ರಿಟಿ ಹೊರತಾಗಿ ರಂಜನಿ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ. ಬೆಸ್ಟ್ ಫ್ರೆಂಡ್ಸ್ ಅಂತ ಇರುವವರೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನಾಗಿರುತ್ತೆ. ನಾನು ಹೇಳಿದ ಹಾಗೆ ನನ್ನ ಜೀವನ ಚೆನ್ನಾಗಿದೆ ಎಂದು ‘ಪಬ್ಲಿಕ್ ಟಿವಿ ಡಿಜಿಟಲ್’ಗೆ ಪ್ರತಿಕ್ರಿಯಿಸಿದ್ದರು.
ಹಲವು ವರ್ಷಗಳ ಸ್ನೇಹವನ್ನು ಇಂದು ಅಧಿಕೃತಪಡಿಸಿರುವ ರಂಜನಿ, ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ. ಹಾಗಾಗಿ 2 ವರ್ಷಗಳ ಕಾಲ ಮದುವೆಯ ಬಗ್ಗೆ ಆಲೋಚನೆ ಮಾಡಿಲ್ಲ. ನಮ್ಮ ಎರಡು ಕುಟುಂಬದ ಕಡೆಯಿಂದಲೂ ಮದುವೆಗೆ ಸಮ್ಮತಿ ಇದೆ. ಮೊದಲಿಂದಲೂ ನಮ್ಮಿಬ್ಬರ ಬಗ್ಗೆ ಫ್ಯಾಮಿಲಿಯಲ್ಲಿ ಗೊತ್ತಿತ್ತು. ನನ್ನ ವೃತ್ತಿಗೆ ಸಾಗರ್ ಅವರ ಕುಟುಂಬದಿಂದಲೂ ಬೆಂಬಲವಿದೆ ಎಂದು ಹೇಳಿದ್ದಾರೆ.
ಕನ್ನಡತಿ ಖ್ಯಾತಿಯ ರಂಜನಿ ಅವರು ಲವ್ಲಿ ಸ್ಟಾರ್ ಪ್ರೇಮ್ ಮತ್ತು ಗೋಲ್ಡನ್ ಗಣೇಶ್ ಪುತ್ರನಿಗೆ ನಿರ್ದೇಶನ ಮಾಡ್ತಿದ್ದಾರೆ. ‘ಡಿ ಡಿ ಢಿಕ್ಕಿ’ ಎಂದು ಸಿನಿಮಾಗೆ ಟೈಟಲ್ ಇಡಲಾಗಿದೆ.