ವಿದೇಶಿ ಪ್ರವಾಸದಲ್ಲಿರುವ ರಮ್ಯಾ ಅತೀ ಶೀಘ್ರದಲ್ಲೇ ಭಾರತಕ್ಕೆ ವಾಪಸ್ಸಾಗುವುದಾಗಿ ತಿಳಿಸಿದ್ದರು. ಇನ್ನೂ ಅವರು ಭಾರತಕ್ಕೆ ಆಗಮಿಸಿಲ್ಲ. ಆದರೆ, ಅವರು ಕರ್ನಾಟಕಕ್ಕೆ ಬಂದ ನಂತರ ಯಾವೆಲ್ಲ ಕೆಲಸದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಈ ಮಾಹಿತಿಯು ನಿಜಕ್ಕೂ ಅಭಿಮಾನಿಗಳಿಗೆ ಸಂಭ್ರಮ ತರಲಿದೆ.
ಡಾಲಿ ಧನಂಜಯ್ (Dolly Dhananjay) ಹುಟ್ಟು ಹಬ್ಬದ ದಿನದಂದು ಉತ್ತರಕಾಂಡ (Uttarkanda) ಸಿನಿಮಾ ಟೀಮ್ ಟೀಸರ್ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂದಿನ ಕಾರ್ಯಕ್ರಮಕ್ಕೆ ಚಿತ್ರದ ನಾಯಕಿಯಾಗಿರುವ ರಮ್ಯಾ (Ramya) ಗೈರಾಗಿದ್ದರು. ಉತ್ತರಕಾಂಡ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಮ್ಯಾ, ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಏಕೆ ಬರಲಿಲ್ಲ ಎನ್ನುವ ಪ್ರಶ್ನೆ ಮೂಡಿತ್ತು. ಇದನ್ನೂ ಓದಿ:3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಜೆನಿಲಿಯಾ? ವೈರಲ್ ಆಯ್ತು ಫೋಟೋ
ಉತ್ತರಕಾಂಡ ಸಿನಿಮಾದ ಕೆಲಸ ದೃಶ್ಯಗಳು ಚಿತ್ರೀಕರಣವಾಗಿದ್ದರೂ, ಆ ಶೂಟಿಂಗ್ ನಲ್ಲಿ ಮತ್ತೋರ್ವ ನಾಯಕಿ ಸಪ್ತಮಿ ಗೌಡ (Saptami Gowda) ಮಾತ್ರ ಭಾಗಿಯಾಗಿದ್ದಾರೆ. ಹಾಗಾಗಿ ರಮ್ಯಾ ಈ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಸಿನಿಮಾದಿಂದ ಹೊರ ಬಂದ ಕಾರಣದಿಂದಾಗಿ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನುವ ಮಾತೂ ಕೇಳಿ ಬಂದಿತ್ತು.
ರಮ್ಯಾ ವಿದೇಶಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದರು. ಆ ವಿಡಿಯೋ ಮತ್ತು ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟೀಸರ್ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಕಾರಣ ತಾವು ವಿದೇಶದಲ್ಲಿ ಇರುವುದೇ ಆಗಿದೆ ಎನ್ನುವುದನ್ನು ಸ್ಪಷ್ಟ ಪಡಿಸಿದ್ದರು. ಆದರೂ, ಉತ್ತರ ಕಾಂಡ ಸಿನಿಮಾದಲ್ಲಿ ರಮ್ಯಾ ಇರುವುದು ಅನುಮಾನ ಎಂದು ಹೇಳಲಾಗಿತ್ತು.
ಇದೀಗ ಅಸಲಿ ಸಮಾಚಾರ ಹೊರ ಬಿದ್ದಿದ್ದು, ರಮ್ಯಾ ಭಾರತಕ್ಕೆ ಬಂದ ತಕ್ಷಣವೇ ಉತ್ತರಕಾಂಡ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಲಿದ್ದಾರಂತೆ. ಮುಂದಿನ ತಿಂಗಳು ನಡೆಯಲಿರುವ ಚಿತ್ರೀಕರಣದಲ್ಲಿ (Shooting) ಅವರು ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದ್ದೆ. ಈ ಪಾತ್ರಕ್ಕಾಗಿ ಅವರು ಸಖತ್ ತಯಾರಿ ಕೂಡ ಮಾಡಿಕೊಂಡಿದ್ದು, ಮತ್ತೆ ಹಳೆಯ ರಮ್ಯಾರನ್ನು ಈ ಸಿನಿಮಾದಲ್ಲಿ ನೋಡಬಹುದಂತೆ.
Web Stories