ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ (Actress Ramya) ಶಕ್ತಿ ದೇವತೆ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ (Bande Mahakali Temple) ಭೇಟಿ ನೀಡಿದ್ದಾರೆ. ದೀಪಾವಳಿ ಅಮವಾಸ್ಯೆಯ ಹಿನ್ನೆಲೆ ದೇಗುಲಕ್ಕೆ ಭೇಟಿ ನೀಡಿ ಅಮ್ಮನವರ ಆಶೀರ್ವಾದ ಪಡೆದಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಂಡೆ ಮಹಾಕಾಳಿ ದರ್ಶನ ಪಡೆದಿದ್ದಾರೆ.
ನಟಿ ರಮ್ಯಾ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಟಿ ರಮ್ಯಾ ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಗೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು. ನಿರ್ಮಾಣದ ಜೊತೆಗೆ ನಟನೆ ಮಾಡಲು ಮನಸ್ಸು ಮಾಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಈ ಬಗ್ಗೆ ಇನ್ನು ಯಾವ ಅಪ್‌ಡೇಟ್ ಸಿಕ್ಕಿಲ್ಲ.ಇದನ್ನೂ ಓದಿ: ಗೋಲ್ಡನ್ ಪಾಸ್ ಪಡೆದು, ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ಧ್ರುವ ಸರ್ಜಾ
ದೀಪಾವಳಿ ಹಬ್ಬದ ಪ್ರಯುಕ್ತ ಮಹಾಕಾಳಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣ ಹಾಗೂ ನಟನೆಯ ಬಗ್ಗೆ ಹೊಸ ಅಪ್‌ಡೇಟ್ ಕೊಡುವ ನಿರೀಕ್ಷೆಗಳಿವೆ. ಇದರ ಮಧ್ಯೆ ಜಾಲತಾಣದಲ್ಲಿ ತಮಗೆ ಕೆಟ್ಟದಾಗಿ ಕಮೆಂಟ್ಸ್ ಮಾಡಿದವರ ವಿರುದ್ಧ ಸಮರ ಸಾರಿದ್ದರು. ಅದಕ್ಕೆ ತಕ್ಕ ಶಾಸ್ತಿಯನ್ನೂ ಮಾಡಿಸಿದ್ದಾರೆ.