‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagidaare) ಚಿತ್ರತಂಡ ವಿವಾದದ ಸಂಬಂಧ ರಮ್ಯಾ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ರಮ್ಯಾ, ಚಿತ್ರತಂಡದ ಜೊತೆಗಿನ ವಿವಾದದಲ್ಲಿ ನ್ಯಾಯ ನನ್ನ ಪರ ಇದೆ ಎಂದಿದ್ದಾರೆ. ಇದನ್ನೂ ಓದಿ:6.5 ಲಕ್ಷ ಕೊಡದೇ ವಂಚಿಸಿದ ಆರೋಪ- ನವನಿರ್ದೇಶಕಿ ವಿರುದ್ಧ ದೂರು
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡವು ರಮ್ಯಾ (Ramya) ಅನುಮತಿ ಇಲ್ಲದೇ ಫೋಟೋ, ವಿಡಿಯೋ ಬಳಸಿದ್ದರ ಬಗ್ಗೆ ನಟಿ ಮಾತನಾಡಿ, ಸಿನಿಮಾ ಕುರಿತು ಮಾಡಿಕೊಂಡಿರುವ ಅಗ್ರಿಮೆಂಟ್‌ನಲ್ಲಿ ಸ್ಪಷ್ಟವಾಗಿ ಬರೆದಿದೆ. ನನ್ನ ಒಪ್ಪಿಗೆ ಇಲ್ಲದೇ ಫೋಟೋ ಆಗಲಿ, ವಿಡಿಯೋ ಆಗಲಿ ಬಳಸುವಂತಿಲ್ಲ ಎಂದಿದೆ. ಅದರಂತೆ ಚಿತ್ರದ ನಿರ್ದೇಶಕರು ಕೂಡ ಆಯ್ತು ನಾವು ಬಳಸೋದಿಲ್ಲ ಎಂದಿದ್ದರು.
ಆ ನಂತರ ಸಿನಿಮಾ ರಿಲೀಸ್‌ಗೂ ಮುನ್ನ ಟ್ರೈಲರ್ ಹಾಕಿದ್ದಾರೆ. ಅದರಲ್ಲಿ ನನ್ನ ತುಣುಕನ್ನು ಬಳಸಿದ್ದಾರೆ. ಆದರೆ ಎಲ್ಲೂ ಕ್ಯಾಮಿಯೋ ರೋಲ್ ಮಾಡ್ತಿದ್ದೇನೆ ಅಂತ ಹಾಕಿಯೇ ಇಲ್ಲ. ನಾನೇ ಹೀರೋಯಿನ್ ಎನ್ನುವಂತೆ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಹೀಗೆ ಮಾಡಿರೋದು ನಿಜಕ್ಕೂ ತಪ್ಪು. ಇದನ್ನು ಕೋರ್ಟ್ ಕೂಡ ಒಪ್ಪಿಕೊಂಡಿದೆ. ಈ ವಿಚಾರದಲ್ಲಿ ನ್ಯಾಯ ನನ್ನ ಪರ ಇದೆ. ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಕೆಲಸಗಳಿವೆ ಎಂದು ನಟಿ ಮಾತನಾಡಿದ್ದಾರೆ.
ಸದ್ಯ ತಾವು ಇಂದು ಕೋರ್ಟ್ ಕೇಳಿದ ದಾಖಲೆಗಳನ್ನು ನೀಡಿ ಸಹಿ ಹಾಕಿದ್ದೇನೆ. ಮಾರ್ಚ್ 19ರಂದು ಈ ಸಂಬಂಧ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಅಂದಹಾಗೆ, 2023ರಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ರಿಲೀಸ್ ಆಗಿತ್ತು. ರಮ್ಯಾ ಅನುಮತಿ ಇಲ್ಲದೇ ಫೋಟೋ, ವಿಡಿಯೋ ಬಳಸಿರೋದಕ್ಕೆ ನಟಿ ಕೋರ್ಟ್ ಮೊರೆ ಹೋಗಿದ್ದರು.