ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ಮತ್ತೆ ಸಿನಿಮಾದಲ್ಲಿ ನಟಿಸಲಿ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸದ್ಯದಲ್ಲೇ ಸಿನಿಮಾದಲ್ಲಿ ನಟಿಸೋದಾಗಿ ರಮ್ಯಾ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹೊಸ ಚಿತ್ರಕ್ಕೆ ಸಹಿ ಹಾಕಿದರು ನಿಮಿಕಾ ರತ್ನಾಕರ್!
Advertisement
ಫಿಲ್ಮ್ ಫಿಸ್ಟಿವಲ್ ಸಂವಾದದಲ್ಲಿ ಭಾಗಿಯಾಗಿದ್ದ ರಮ್ಯಾ ಅವರು ಸಿನಿಮಾ ಕಮ್ ಬ್ಯಾಕ್ ರಿಯಾಕ್ಟ್ ಮಾಡಿದ್ದಾರೆ. ಈಗಾಗಲೇ 4 ಸ್ಕ್ರಿಪ್ಟ್ ಕೇಳಿದ್ದೇನೆ. ಬಹುಶಃ ಅದರಲ್ಲಿ ಒಂದು ಸಿನಿಮಾದಲ್ಲಿ ನಾನು ನಟಿಸುತ್ತೇನೆ ಎಂದಿದ್ದಾರೆ.
Advertisement
Advertisement
ಇದೇ ವೇಳೆ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ತಾವ್ಯಾಕೆ ನಟಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದು ಒಟಿಟಿಗಾಗಿಯೇ ಎಂದು ಮಾಡಿದ ಸಿನಿಮಾವಾಗಿತ್ತು. ನನ್ನ ಅಭಿಮಾನಿಗಳ ಮುಂದೆ ಬರುವಾಗ ಬೆಳ್ಳಿಪರದೆಯಲ್ಲೇ ಕಾಣಿಸಿಕೊಳ್ಳಬೇಕೆಂದಿತ್ತು ಎಂದರು ರಮ್ಯಾ.
Advertisement
ಅಂದಹಾಗೆ, ಕಡೆಯದಾಗಿ 2016ರಲ್ಲಿ ‘ನಾಗರಹಾವು’ ಸಿನಿಮಾದಲ್ಲಿ ದಿಗಂತ್ ಜೊತೆ ರಮ್ಯಾ ನಟಿಸಿದ್ದರು. ಬಳಿಕ 2023ರಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.