ನಟ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ಜನ್ಮದಿನದ ಪ್ರಯುಕ್ತ ‘ಅಪ್ಪು’ (Appu) ಸಿನಿಮಾ ಮಾ.14ರಂದು ರೀ-ರಿಲೀಸ್ ಆಗಿದೆ. ಈ ಹಿನ್ನೆಲೆ ವೀರೇಶ್ ಥಿಯೇಟರ್‌ಗೆ ಆಗಮಿಸಿ ವಿನಯ್ ರಾಜ್‌ಕುಮಾರ್, ಶರ್ಮಿಳಾ ಮಾಂಡ್ರೆ ಜೊತೆ ರಮ್ಯಾ (Ramya) ‘ಅಪ್ಪು’ ಚಿತ್ರ ವೀಕ್ಷಿಸಿದ್ದಾರೆ. ಬಳಿಕ ‘ಪಬ್ಲಿಕ್ ಟಿವಿ’ಗೆ ಮಾತನಾಡಿದ ರಮ್ಯಾ, ಸಿನಿಮಾ ಮೂಲಕ ಅಪ್ಪು ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ.
‘ಅಪ್ಪು’ ಸಿನಿಮಾ ರಿಲೀಸ್ ಆದಾಗ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದೆ, ಹಾಗಾಗಿ ಹಳೆಯ ನೆನಪುಗಳೆಲ್ಲಾ ಬರುತ್ತಿದೆ. ಆಗ ನಾನು ‘ಅಪ್ಪು’ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದು, ನೆನಪಾಯ್ತು. ಈಗ ಮತ್ತೆ ಅದೇ ಸಿನಿಮಾ ನೋಡಿದಾಗ ಅಪ್ಪು ಇಲ್ಲ ಅಂತ ನಂಬೋಕೆ ಆಗಲ್ಲ. ಆದರೆ ಸಿನಿಮಾ ಮೂಲಕ ಅಪ್ಪು ಜೀವಂತವಾಗಿದ್ದಾರೆ ಎಂದು ಪುನೀತ್‌ರನ್ನು ನಟಿ ಸ್ಮರಿಸಿದ್ದಾರೆ. ಈ ವೇಳೆ, ಹಾಗಾಗಿ ಅಭಿಮಾನಿಗಳೊಂದಿಗೆ ಅಪ್ಪು ಚಿತ್ರ ನೋಡಿದ್ದು ಖುಷಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ:‘ರಾಣಾ ಅಮರ್ ಅಂಬರೀಶ್’ ಎಂದು ಅಂಬಿ ಮೊಮ್ಮಗನಿಗೆ ನಾಮಕರಣ
‘ಅಪ್ಪು’ ಸಿನಿಮಾ ಬಂದು 23 ವರ್ಷಗಳಾಯ್ತು. ಈಗ ಮತ್ತೆ ಈ ಚಿತ್ರವನ್ನು ನೋಡೋಕೆ ಬಂದಿದ್ದೀನಿ, ನಂಬೋಕೆ ಆಗ್ತಿಲ್ಲ. ಇದೇ ಜೀವನ. ಮೊದಲ ಬಾರಿ ‘ಅಪ್ಪು’ ಸಿನಿಮಾ ನೋಡಿದಾಗ ನಾನು ಕೂಡ ಅಭಿಮಾನಿಯಾಗಿ ಹೋಗಿ ಚಿತ್ರ ನೋಡಿದ್ದೆ, ಆ ನಂತರ ಪುನೀತ್ ಜೊತೆ ನಾನು ಕೂಡ ಸಿನಿಮಾ ಮಾಡಿದ್ದೀನಿ. ಜನ ನನ್ನನ್ನು ಗುರುತಿಸುತ್ತಾರೆ. ಈಗ ಚಿತ್ರ ನೋಡಿದಾಗ ಎಲ್ಲವೂ ನೆನಪಾಗುತ್ತದೆ ಎಂದಿದ್ದಾರೆ ಮೋಹಕ ತಾರೆ ರಮ್ಯಾ.
ಇನ್ನೂ ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ (Rakshita) ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. 2002ರಲ್ಲಿ ಈ ಸಿನಿಮಾದ ಮೂಲಕ ಪುನೀತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.