ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ನಟಿ ರಮ್ಯಾ ಅವರು ಸಕ್ಕರೆ ತಿನ್ನುವುದನ್ನು ಬಿಟ್ಟಿದ್ದಾರೆ.
ನಟಿ ರಮ್ಯಾ ಅವರಿಗೆ ಸಕ್ಕರೆ ಅಂದರೆ ತುಂಬಾ ಇಷ್ಟ. ಆದರೆ ಈಗ ರಮ್ಯಾ ಅವರು ಈ ವರ್ಷದ ಕೊನೆಯವರೆಗೂ ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನ ಸೇವಿಸದೇ ಇರಲು ನಿರ್ಧಾರ ಮಾಡಿದ್ದಾರೆ. ಸಕ್ಕರೆ ಮತ್ತು ಸಿಹಿ ಪದಾರ್ಥಗಳು ತಮ್ಮ ಜೀವನ ಶೈಲಿಯ ಮೇಲೆ ಭಾರೀ ಪರಿಣಾಮ ಬೀರಿರುವ ಕಾರಣ ಡಿಸೆಂಬರ್ 31 ರವರೆಗೂ ಸಕ್ಕರೆ ಸೇವಿಸುವುದಿಲ್ಲ ಎಂದು ರಮ್ಯಾ ಅವರು #ನೋಶುಗರ್ ಚಾಲೆಂಜ್ ಸ್ವೀಕರಿಸಿದ್ದಾರೆ. ಮೂರು ದಿನಗಳ ಹಿಂದೆ ಈ ಬಗ್ಗೆ ಅವರೇ ಇನ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.
Advertisement
Advertisement
ನಟಿ ರಮ್ಯಾ ”ಇದು ಸಕ್ಕರೆ ಇಲ್ಲದ ನನ್ನ ಮೊದಲ ದಿನವಾಗಿದೆ. ಈ ವರ್ಷದ ಕೊನೆಯವರೆಗೂ ಇದನ್ನು ಮುಂದುವರಿಸಲು ನಾನು ತೀರ್ಮಾನ ಮಾಡಿದ್ದೇನೆ. ಇದು ತುಂಬಾ ಒಳ್ಳೆಯದು. ಈ ಹಿಂದೆ ನಾನು ಸಕ್ಕರೆಯನ್ನ ಬಿಟ್ಟು ಇರಬೇಕು ಅಂತ ಹಲವಾರು ಬಾರಿ ನಾನು ಪ್ರಯತ್ನ ಪಟ್ಟಿದ್ದೇನೆ. ಆದರೆ 2-3 ದಿನಗಳಿಗಿಂತ ಹೆಚ್ಚು ದಿನ ಸಕ್ಕರೆಯನ್ನು ಬಿಟ್ಟಿರಲು ಸಾಧ್ಯ ಆಗಲಿಲ್ಲ” ಎಂದು ಹೇಳಿಕೊಂಡಿದ್ದಾರೆ.
Advertisement
“ಅಷ್ಟೇ ಅಲ್ಲದೇ ಎಷ್ಟೋ ಬಾರಿ ಸಕ್ಕರೆ ತ್ಯಜಿಸಲು ನಾನು ನನ್ನ ಪ್ರೀತಿಸುವ ವ್ಯಕ್ತಿಗಳ ಮೇಲೆ ಪ್ರತಿಜ್ಞೆ ಮಾಡಿದ್ದೇನೆ. ಆದರೂ ನಾನು ಅವರ ಮೇಲೆ ಪ್ರಮಾಣ ಮಾಡಿದ್ದೇನೆ ಎಂದು ನಾನು ಮರೆತುಬಿಡುತ್ತಿದ್ದೆ. ನಾನು ಈ ಹಿಂದೆ ಇಷ್ಟಪಟ್ಟು ಸಿಹಿ ತಿನಿಸುಗಳನ್ನು ತಿನ್ನುತ್ತಿದ್ದೆ. ಆದರೆ ಈಗ ಅದೇ ಅಭ್ಯಾಸವಾಗಿ ಹೋಗಿದೆ. ನನಗೆ ಒತ್ತಡ ಹೆಚ್ಚಾದಾಗ ಸಿಹಿ ತಿನ್ನಬೇಕು ಎನಿಸುತ್ತದೆ. ಸಕ್ಕರೆ ದೈಹಿಕ ಹಾಗೂ ಮಾನಸಿಕವಾಗಿ ನನ್ನ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಿದೆ” ಎಂದು ರಮ್ಯಾ ತಿಳಿಸಿದ್ದಾರೆ.
Advertisement
ನನ್ನ ಜೀವನದಲ್ಲಿ ನಾನು ಸಕ್ಕರೆಯನ್ನು ಅತಿಯಾಗಿ ಸೇವಿಸಿದ್ದೇನೆ. ಆದ್ದರಿಂದ ನಾನು ಈಗ ಮತ್ತೆ ಸಕ್ಕರೆ ಕಡಿಮೆ ಮಾಡಬೇಕು ಎಂಬ ಕಾರಣದಿಂದ ಡಿಸೆಂಬರ್ 31 ರವರೆಗೆ ಸಕ್ಕರೆಗೆ ಗುಡ್ ಬೈ ಹೇಳಲು ನಿರ್ಧಾರ ಮಾಡಿದ್ದೇನೆ. ಆದ್ದರಿಂದ ನನ್ನೊಂದಿಗೆ ನೀವು ಚಾಲೆಂಜ್ ತೆಗೆದುಕೊಳ್ಳಲು ಇಷ್ಟಪಟ್ಟರೆ ಮೊದಲು ನಿಮ್ಮ ಜೀವನದ ಸ್ಟೋರಿಯನ್ನು ಹಂಚಿಕೊಳ್ಳಿ. ಬಳಿಕ ನನ್ನ ಜೊತೆ ನೀವು ನೋ ಸುಗರ್ ಚಾಲೆಂಜ್ ಸ್ವೀಕಸಿ ಎಂದು ನಟಿ ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.instagram.com/p/Bo8dFYaD63r/?hl=en&taken-by=divyaspandana