ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಚೈತ್ರಾ ಆಚಾರ್, ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲರು. ಈಗ ಅವರು ಮಾರ್ನಮಿಗೆ ಮದುವೆಯಾಗೋದಿಕ್ಕೆ ಹೊರಟಿದ್ದಾರೆ. ಅರೇ! ಚೈತ್ರಾ ಮದುವೆನಾ ಅಂತಾ ಹುಬ್ಬೇರಿಸಬೇಡಿ. ಮದುವೆ ನಿಜವೇ, ಆದ್ರೆ ರೀಲ್‌ನಲ್ಲಿ. ಕರಾವಳಿ ಭಾಗದ ಪ್ರೇಮಕಥೆಯುಳ್ಳ ‘ಮಾರ್ನಮಿ’ ಸಿನಿಮಾದಲ್ಲಿ ಚೈತ್ರಾ ಆಚಾರ್ (Chaithra Achar) ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಪಾತ್ರದ ಪರಿಚಯದ ಟೀಸರ್ ಇಂದು (ಮೇ 25) ಬಿಡುಗಡೆಯಾಗಿದೆ. ಇದನ್ನೂ ಓದಿ:ಆಲಿಯಾ ಭಟ್ ಮತ್ತೆ ಪ್ರೆಗ್ನೆಂಟ್..? ವೈರಲ್ ಆಯ್ತು ವಿಡಿಯೋ..!


ಈ ಸಿನಿಮಾದಲ್ಲಿ ಗಿಣಿರಾಮ, ನಿನಗಾಗಿ ಸೀರಿಯಲ್ ಖ್ಯಾತಿಯ ರಿತ್ವಿಕ್ ಮಠದ್ ನಾಯಕನಾಗಿ ಅಭಿನಯಿಸಿದ್ದಾರೆ. ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರ ಶೆಟ್ಟಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಶಿವಸೇನ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

