ಡಿಸಿಎಂ ಡಿಕೆ ಶಿವಕುಮಾರ್ ಅವರು ಕಲಾವಿದರ ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಎಂದ ಹೇಳಿಕೆಯ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಡಿಸಿಎಂ ಡಿಕೆಶಿ (DK Shivakumar) ಅವರು ನೀಡಿರುವ ಹೇಳಿಕೆ ಸರಿಯಲ್ಲ. ಹಾಗೆ ಮಾತನಾಡಬಾರದಿತ್ತು ಎಂದು ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:1 ಕೆಜಿ ಚಿನ್ನ ಸಾಗಾಟಕ್ಕೆ ರನ್ಯಾಗೆ 4ರಿಂದ 5 ಲಕ್ಷ ಕಮಿಷನ್ – ನಟಿ ಕೇವಲ ಪಾತ್ರಧಾರಿ, ಅಸಲಿ ಕಿಂಗ್‌ಪಿನ್ ಬೇರೆ!
ಡಿಸಿಎಂ ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ಹೇಳಿಕೆ ಸರಿಯಲ್ಲ. ಆದರೆ ಅವರು ಹಾಗೇ ಮಾತನಾಡಬಾರದಿತ್ತು. ಬೆದರಿಸುವ ಉದ್ದೇಶ ಇಲ್ಲ ಅಂತ ಅವರೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರು ಹೇಳಿದ ಹೇಳಿಕೆ ತಪ್ಪು. ಆದರೆ ಅವರ ಅವರು ಹೇಳಿದ ರೀತಿ ಕೆಲವರಿಗೆ ಇಷ್ಟ ಆಗಿಲ್ಲ. ಈ ವಿಚಾರವಾಗಿ ಡಿಕೆಶಿ ಅವರು ಕ್ಲ್ಯಾರಿಟಿ ಕೊಟ್ಟಿದ್ದಾರೆ. ಈ ವಿಚಾರವನ್ನು ನಾವು ಇಲ್ಲಿಗೆ ಬಿಡೋದು ಒಳ್ಳೆಯದು ಎಂದಿದ್ದಾರೆ ರಮ್ಯಾ.
ಫಿಲ್ಮ್ ಫೆಸ್ಟಿವಲ್‌ಗೆ ಒಂದು ವಾರದ ಹಿಂದೆಯೇ ನನಗೆ ಆಹ್ವಾನ ಬಂದಿದೆ. ಬೇರೆಯವರಿಗೆ ಆಹ್ವಾನ ಹೋಗಿದ್ಯೋ ಇಲ್ವೋ ನನಗೆ ಗೊತ್ತಿಲ್ಲ. ನನಗೆ ಆಹ್ವಾನ ಬಂದಿದೆ, ಹಾಗಾಗಿ ನಾನು ಈಗ ಫಿಲ್ಮ್ ಫೆಸ್ಟಿವಲ್‌ಗೆ ಹೋಗ್ತಿದ್ದೀನಿ. ಈ ವೇಳೆ, ನಾಡು, ನುಡಿ, ಜಲದ ವಿಚಾರದಲ್ಲಿ ಯಾವುದೇ ಆಹ್ವಾನ ಬೇಕಿಲ್ಲ. ಎಲ್ಲರೂ ಅವರಾಗಿಯೇ ಬರಬೇಕು. ಇದ್ಯಾವ್ದೋ ಮದುವೆ, ಪಾರ್ಟಿ ಅಲ್ಲ. ಇವತ್ತು ಮಧ್ಯಾಹ್ನ ನಾನೂ ಫಿಲ್ಮ್ ಫೆಸ್ಟಿವಲ್‌ಗೆ ಹೋಗುತ್ತಿದ್ದೇನೆ ಎಂದಿದ್ದಾರೆ.