ಸ್ಯಾಂಡಲ್‌ವುಡ್ ನಟಿ ರಮ್ಯಾ ಪ್ರಾಣಿ ಪ್ರಿಯೆ ಎನ್ನುವುದು ಗೊತ್ತಿರುವ ವಿಚಾರ. ಪ್ರಾಣಿಗಳ ಮೇಲೆ ದೌರ್ಜನ್ಯವಾದಾಗ ಪ್ರತಿಬಾರಿಯೂ ಅವರು ಧ್ವನಿ ಎತ್ತುತ್ತಾರೆ. ಬೀದಿ ನಾಯಿಗಳ ಬಗ್ಗೆ ಕಾಳಜಿ ತೋರಿದ್ದಾರೆ. ಇದೀಗ ಪ್ರಾಣಿ ಹಿಂಸೆ ತಡೆ ಕಾಯ್ದೆಯನ್ನು ಕೇಂದ್ರ ಸರ್ಕಾರ ತಂದಿರುವ ಕುರಿತಾಗಿ ರಮ್ಯಾ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.
Advertisement
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ಕೆಲ ತಿದ್ದುಪಡಿ ಮಾಡಿದೆ ದಂಡದ ಪ್ರಮಾಣವನ್ನು ಹೆಚ್ಚಿಸಿದೆ. ಈ ಕುರಿತಾಗಿ ರಮ್ಯಾ ಸೋಶಿಯಲ್ ಮೀಡಿಯಾ ಮೂಲಕವಾಗಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
Advertisement
This was our clarion call and I’m so glad the @Min_FAHD @PRupala @BJP4India is finally acting on it ???????? Penalty is at 50 rupees it could go up from anywhere between 5,000-50,000 rupees. Hopefully this will minimise if not completely stop cruelty against animals???????? pic.twitter.com/6fUW8rQ9XA
— Divya Spandana/Ramya (@divyaspandana) March 30, 2022
ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಈ ಹಿಂದೆ 50 ರೂಪಾಯಿ ಇದ್ದ ದಂಡ ಈಗ 5,000 ದಿಂದ 50,000 ರೂಪಾಯಿವರೆಗೂ ದಂಡ ವಿಧಿಸಬಹುದಾಗಿದೆ. ಇದರಿಂದಾಗಿ ಪ್ರಾಣಿಗಳ ಮೇಲೆ ನಡೆಯುತ್ತಿರುವ ಕ್ರೌರ್ಯಯನ್ನು ಈ ಕಾಯ್ದೆ ಪರಿಣಾಮಕಾರಿಯಾಗಿ ತಡೆಗಟ್ಟಬಹುದು.
Advertisement
Advertisement
ಭಾರತ ಸರ್ಕಾರವು ಅಂತಿಮವಾಗಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ದಂಡ ಮತ್ತು ಶಿಕ್ಷೆಯ ಮೇಲೆ ತಿದ್ದುಪಡಿಗಳನ್ನು ಮಾಡಿದೆ. ನನಗೆ ತುಂಬಾ ಖುಷಿಯಾಗಿದೆ. ನಮ್ಮ ಕರೆಗೆ ಸ್ಪಂದಿಸಿದ್ದಕ್ಕಾಗಿ ಸಚಿವ ಪರಶೋತ್ತಮ್ ರೂಪಲಾ ಅವರಿಗೆ ಧನ್ಯವಾದಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಬರೆದುಕೊಂಡಿದ್ದಾರೆ. ನಟಿ ಐಂದಿತ್ರಾ ರೈ ಕೂಡ ಈ ಪೋಸ್ಟನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಲ್ಪಮತಕ್ಕೆ ಕುಸಿದ ಇಮ್ರಾನ್ ಖಾನ್ ಸರ್ಕಾರ- ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಸಾಧ್ಯತೆ
ಸ್ಯಾಂಡಲ್‌ವುಡ್‌ಗೆ ರಮ್ಯಾ ಮತ್ತೆ ಕಮ್ಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಂತರ, ಒಂದೆರಡು ಚಿತ್ರಗಳನ್ನು ಪೂರ್ಣಗೊಳಿಸಿದ ರಮ್ಯಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ರಮ್ಯಾ ಮತ್ತೆ ಸಿನಿಮಾ ಮಾಡುತ್ತಾರ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಕೊನೆಯ ಬಾಲ್ ವರೆಗೂ ಹೋರಾಡುತ್ತಾರೆ, ರಾಜೀನಾಮೆ ಕೊಡಲ್ಲ: ಪಾಕ್ ಸಚಿವ