ಸ್ಟಾರ್ ನಟನ ಜೊತೆ ಸ್ಯಾಂಡಲ್‍ವುಡ್‍ಗೆ ಪದ್ಮಾವತಿ ರೀ-ಎಂಟ್ರಿ!

Public TV
1 Min Read
ramya 6

ಬೆಂಗಳೂರು: ಮದಕರಿ ನಾಯನ ಒಂದೇ ಕತೆಗೆ ಈಗಾಗಲೇ ದರ್ಶನ್ ಹಾಗೂ ಸುದೀಪ್ ಬೇರೆ ಬೇರೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸುತ್ತಿರುವ ಮದಕರಿ ನಾಯಕನ ಚಿತ್ರಕ್ಕೆ ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ರೀ-ಎಂಟ್ರಿ ನೀಡಲಿದ್ದಾರೆ.

ಈ ಹಿಂದೆ ಅಂದರೆ 2006 ರಂದು ರಮ್ಯಾ ಅವರು ದರ್ಶನ್ ಅವರ ‘ದತ್ತ’ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ರಮ್ಯಾ ಬರೋಬ್ಬರಿ 12 ವರ್ಷದ ನಂತರ ದರ್ಶನ್ ಅವರ ಜೊತೆ ‘ಗಂಡುಗಲಿ ಮದಕರಿ ನಾಯಕ’ ಚಿತ್ರದಲ್ಲಿನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.

ramya 3

ಈ ಹಿಂದೆ ಪೌರಾಣಿಕ ಚಿತ್ರದಲ್ಲಿ ರಮ್ಯಾ ನಟಿಸಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ‘ಕಠಾರಿ ವೀರ ಸುರಸುಂದರಾಂಗಿ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ನಿರ್ಮಾಪಕ ಹಾಗೂ ಕಾಂಗ್ರೆಸ್ ಶಾಸಕ ಮುನಿರತ್ನ ನಿರ್ಮಿಸಿದ್ದರು. ಹೀಗಾಗಿ ರಮ್ಯಾ ಪೌರಾಣಿಕ ಚಿತ್ರವನ್ನು ಮಾಡಿದ್ದರಿಂದ ಗಂಡುಗಲಿ ಮದಕರಿ ನಾಯಕ ಚಿತ್ರದಲ್ಲಿ ಇವರನ್ನೇ ನಾಯಕಿಯಾಗಲಿದ್ದಾರೆ. ಸದ್ಯ ರಮ್ಯಾ ಈ ಹಿಂದೆ ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದ ‘ಬೊಂಬಾಟ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಾಯಕಿಯಾಗಿ ನಟಿಸಿದ್ದರು.

ramya 2

ಈ ದೊಡ್ಡ ಐತಿಹಾಸಿಕ ಚಿತ್ರದಲ್ಲಿ ರಮ್ಯಾ ಅವರನ್ನು ಕರೆತರಲು ಚಿತ್ರತಂಡ ಯೋಚಿಸಿತ್ತು. ಅಲ್ಲದೇ ರಮ್ಯಾ ಅವರಿಗೂ ಕೂಡ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಈ ವಿಷಯವನ್ನು ತಮ್ಮ ಆಪ್ತರ ಬಳಿಯೂ ಹೇಳಿಕೊಂಡಿದ್ದರು ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.

ramya 5

ರಾಕ್‍ಲೈನ್ ವೆಂಕಟೇಶ್ ಅವರು ಈಗಾಗಲೇ ಗಂಡುಗಲಿ ಮದಕರಿ ನಾಯಕ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *