ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಜನ್ಮ ದಿನದ ಪ್ರಯುಕ್ತ ‘ಅಪ್ಪು’ ಚಿತ್ರ ಮಾ.14ರಂದು ರಿಲೀಸ್ ಆಗಿದೆ. ಈ ಹಿನ್ನೆಲೆ ಇಂದು (ಮಾ.16) ಅಭಿಮಾನಿಗಳೊಂದಿಗೆ ಮೋಹಕ ತಾರೆ ರಮ್ಯಾ ‘ಅಪ್ಪು’ (Appu Film) ಚಿತ್ರ ವೀಕ್ಷಿಸಲಿದ್ದಾರೆ.
ಅಭಿಮಾನಿಗಳೊಂದಿಗೆ ಅವರು ಪುನೀತ್ ಮತ್ತು ರಕ್ಷಿತಾ ನಟನೆಯ ‘ಅಪ್ಪು’ ಚಿತ್ರ ವೀಕ್ಷಿಸಲಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ವೀರೇಶ್ ಮಂದಿರಕ್ಕೆ ರಮ್ಯಾ ಆಗಮಿಸಲಿದ್ದಾರೆ. ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನಟ ಪ್ರಭುದೇವ
ಇನ್ನೂ ಪುನೀತ್‌ಗೆ ನಾಯಕಿಯಾಗಿ ‘ಅಭಿ’ ಸಿನಿಮಾದ ಮೂಲಕ ರಮ್ಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಅರಸು, ಆಕಾಶ್ ಸಿನಿಮಾಗಳಲ್ಲಿ ಕೂಡ ಅವರು ಜೊತೆಯಾಗಿ ನಟಿಸಿದ್ದಾರೆ.