ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ (R.R.R) ಸಿನಿಮಾದ ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ಭಾರತಕ್ಕೆ ಭಾರತವೇ ಸಂಭ್ರಮಿಸಿತು. ಪ್ರಧಾನಿ ನರೇಂದ್ರ ಮೋದಿ ಸಮೇತ ಚಿತ್ರತಂಡಕ್ಕೆ ಶುಭಾಶಯ ಕೋರಿದರು. ಹಾಗೆಯೇ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Jagan Mohan Reddy) ಕೂಡ ತಮ್ಮ ರಾಜ್ಯದ ಸಿನಿಮಾವೊಂದು ಅಂಥದ್ದೊಂದು ಪ್ರಶಸ್ತಿ ಪಡೆದಾಗ ಸಹಜವಾಗಿಯೇ ಖುಷಿ ಆಗಿತ್ತು. ಹಾಗಾಗಿಯೇ ಅವರು ಅಭಿಮಾನದಿಂದ ಟ್ವೀಟ್ ಮಾಡಿದ್ದರು.
Advertisement
ಜಗನ್ ಮೋಹನ್ ರೆಡ್ಡಿ ಮಾಡಿರುವ ಟ್ವೀಟ್ ನಲ್ಲಿ, ‘ರಾಜ್ಯದ ಬಾವುಟವನ್ನು ಆಕಾಶದೆತ್ತರಕ್ಕೆ ಹಾರಿಸಿದ ಆರ್.ಆರ್.ಆರ್ ಟೀಮ್ ಗೆ ಧನ್ಯವಾದಗಳು’ ಎಂದು ತಿಳಿಸಿದ್ದರು. ರಾಜ್ಯದ ಬಾವುಟ ಎಂದು ಟ್ವೀಟ್ ಮಾಡಿದ್ದಕ್ಕೆ ಗಾಯಕ ಅದ್ನಾನ್ ಸಾಮಿ (Adnan Sami) ಆಕ್ಷೇಪ ವ್ಯಕ್ತಪಡಿಸಿ. ಮೊದಲು ದೇಶ, ಆಮೇಲೆ ರಾಜ್ಯ. ತೆಲುಗು ಬಾವುಟ ಎಂದು ಬರೆದು ವಿಭಜಿಸಬೇಡಿ’ ಎಂದು ಪ್ರತಿಕ್ರಿಯೆ ನೀಡಿದ್ದರು. ಇದು ಭಾರೀ ಚರ್ಚೆಗೂ ಕಾರಣವಾಗಿತ್ತು. ಪರ ವಿರೋಧದ ಪ್ರತಿಕ್ರಿಯೆ ಕೇಳಿ ಬಂತು. ಇದನ್ನೂ ಓದಿ: ನಾನು ಆಡಿದ ಮಾತು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ: ವಿವಾದಗಳ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ
Advertisement
Advertisement
Advertisement
ಅದ್ವಾನ್ ಸಾಮಿ ಮಾಡಿದ ಟ್ವೀಟ್ ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ತಿರುಗೇಟು ನೀಡಿದ್ದು, ‘ನೀವು ಹೇಳಿದಂತೆ ನಾವು ಭಾರತೀಯರು ನಿಜ. ಆದರೆ, ನಾವು ತೆಲುಗು, ಕನ್ನಡಿಗರು, ತಮಿಳಿಗರು. ನಮ್ಮದೇ ಆದ ಭಾಷೆ, ಬಾವುಟ ಹೊಂದಿದ್ದೇವೆ. ನಾವೆಲ್ಲರೂ ಭಾರತೀಯರು ಜೊತೆಗೆ ವಿವಿಧ ಸಂಸ್ಕೃತಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದವರು’ ಎಂದು ಉತ್ತರಿಸಿದ್ದಾರೆ. ನಮ್ಮ ಅಸ್ಮಿತೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k