ಗೋವಾದಲ್ಲಿ ನಟಿ ರಕುಲ್ ಮದುವೆ: ಪ್ರೀತಿಸಿದ ಹುಡುಗನ ಕೈ ಹಿಡಿದ ನಟಿ

Public TV
1 Min Read
Rakul Preet Singh 3

ಗಿಲ್ಲಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ರಕುಲ್ ಪ್ರೀತಿ ಸಿಂಗ್ (Rakul Preet Singh) ಫೆ.21ರಂದು ಗೋವಾದಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಾಲಿವುಡ್ ನ ಅನೇಕ ನಟಿಯರು ವಿದೇಶಗಳಲ್ಲಿ ಮದುವೆ ಪ್ಲ್ಯಾನ್ ಮಾಡಿದ್ದರೆ, ರಕುಲ್ ಮಾತ್ರ ಗೋವಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರಿಗೆ ಈಗಾಗಲೇ ಆಹ್ವಾನ ಕೂಡ ನೀಡಲಾಗಿದೆ.

Rakul Preet Singh 2

ಮೊನ್ನೆಯಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು.

Rakul Preet Singh 1

ಈ ಸಮಯದಲ್ಲಿ ರಕುಲ್ ಪ್ರೀತಿ ಸಿಂಗ್ ಅವರ ಬಾಯ್‍ಫ್ರೆಂಡ್ ನಟ, ನಿರ್ಮಾಪಕ ಜ್ಯಾಕಿ ಭಗ್ನಾನಿ ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್‌ಡೇ ಮೈ ಲವ್ ಎಂದು ಇನ್‌ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜ್ಯಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಇನ್‌ಸ್ಟಾಗ್ರಾಮ್‍ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್ ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದೇ ಗೆಳೆಯನ ಜೊತೆಯೆ ನಟಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸ್ಯಾಂಡಲ್‍ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಕುಲ್ ಪ್ರೀತಿ ಸಿಂಗ್ ನಟಿಸಿದ್ದಾರೆ. ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಕುಲ್ ಪ್ರೀತ್ ಸಿಂಗ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ, ಸ್ಪೈಡರ್ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

Share This Article