ಬಾಲಿವುಡ್ (Bollywood) ನಿರ್ಮಾಪಕ ಹಾಗೂ ನಟ ಜಕ್ಕಿ ಬಗ್ ನಾನಿ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ (Rakul Singh) ಡೇಟಿಂಗ್ (Dating) ವಿಚಾರ ಹೊಸದೇನೂ ಅಲ್ಲ. ಸದಾ ಅಂಟಿಕೊಂಡೇ ಓಡಾಡುತ್ತಿದ್ದ ಈ ಜೋಡಿಯ ಮದುವೆ ವಿಚಾರ ನೂರಾರು ಬಾರಿ ಗಾಸಿಪ್ ಕಾಲಂನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ, ಸೋಷಿಯಲ್ ಮೀಡಿಯಾಗಳಲ್ಲಂತೂ ಹಲವು ಬಾರಿ ಇವರ ಮದುವೆಯನ್ನೂ ಮಾಡಲಾಗಿದೆ. ಆದರೆ, ಈ ಬಾರಿ ಈ ಜೋಡಿಯ ಮದುವೆಯ ಕುರಿತು ಅಧಿಕೃತ ಮಾಹಿತಿ ಹೊರ ಬಿದ್ದಿದೆ.
ರಾಕುಲ್ ಸಹೋದರ ಅಮನ್ ಸಿಂಗ್ ವಾಹಿನಿಯ ಜೊತೆ ಮಾತನಾಡುತ್ತಾ, ಜಕ್ಕಿ ಬಗ್ ನಾನಿ (Jakki Bug Nani) ಜೊತೆ ರಾಕುಲ್ ಮದುವೆ (Marriage) ಆಗುತ್ತಿರುವುದಾಗಿ ತಿಳಿಸಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದು, ಮದುವೆ ದಿನಾಂಕ ಮತ್ತು ಜಾಗವನ್ನು ಅಂತಿಮಗೊಳಿಸುವುದಷ್ಟೇ ಬಾಕಿ ಎಂದೂ ಅವರು ಹೇಳಿದ್ದಾರೆ. ಇದೇ ವಿಚಾರವನ್ನು ಜಕ್ಕಿ ತಂದೆ ವಾಸು ಅವರು ಕೂಡ ಖಚಿತ ಪಡಿಸಿದ್ದರು, ಶೀಘ್ರದಲ್ಲೇ ಮದುವೆ ಮಾಹಿತಿ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ:‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ
ರೆಹನಾ ಹೈ ತೆರೆ ದಿಲ್ ಮೇನ್ ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿರುವ ಜಕ್ಕಿ ಬಗ್ ನಾನಿ ನಟರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡವರು. ಕೋಲ್ಕತ್ತ ಮೂಲದ ಇವರು, ಕೂಲಿ ನಂ1, ಫಾಲ್ತು, ಅಜಬ್ ಗಜಬ್ ಸೇರಿದಂತೆ ಹಲವು ಸಿನಿಮಾಗಳನ್ನೂ ನಿರ್ಮಿಸಿದ್ದಾರೆ. ರಾಕುಲ್ ಕೂಡ ಛತ್ರಿವಾಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗದಲ್ಲೇ ಇಬ್ಬರೂ ಭೇಟಿಯಾಗಿ, ಇದೀಗ ಹೊಸ ಜೀವನಕ್ಕೆ ಕಾಲಿಡಲು ಇಬ್ಬರೂ ಸಿದ್ಧತೆ ನಡೆಸಿದ್ದಾರೆ.