ಬಾಲಿವುಡ್ ಬೆಡಗಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಪತಿ ಜಾಕಿ ಭಗ್ನಾನಿಗೆ (Jackky Bhagnani) ಸಂಕಷ್ಟ ಎದುರಾಗಿದೆ. ಮದುವೆಯಾಗಿ ಜಾಕಿ ಮನೆಗೆ ಕಾಲಿಟ್ಟ ಬೆನ್ನಲ್ಲೇ ನಟಿಯ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 250 ಕೋಟಿ ರೂ. ಸಾಲದ ಸುಳಿಯಲ್ಲಿ ಭಗ್ನಾನಿ ಕುಟುಂಬ ಸಿಲುಕಿದ್ದಾರೆ. ಇದನ್ನೂ ಓದಿ:ಸಮಂತಾ ಜೊತೆ ಶಾರುಖ್ ಖಾನ್ ರೊಮ್ಯಾನ್ಸ್
ನಟಿ ರಕುಲ್ ಮಾವ ವಶು ಭಗ್ನಾನಿ ನೇತೃತ್ವದ ಪೂಜಾ ಎಂಟೈನ್‌ಮೆಂಟ್ ಸಂಸ್ಥೆ ಅಡಿ ಕಳೆದ 30 ವರ್ಷಗಳಿಂದ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದೆ. ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದೆ. ಆದರೆ ಇತ್ತೀಚೆಗೆ ನಿರ್ಮಾಣ ಮಾಡಿದ 2 ಸಿನಿಮಾಗಳಿಂದ ಭಗ್ನಾನಿ ಕುಟುಂಬಕ್ಕೆ ನಷ್ಟವಾಗಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೆರೆಕಂಡ ‘ಗಣಪತ್’ ಸಿನಿಮಾವನ್ನು ವಿಕಾಸ್ ಬಹ್ಲ್ ನಿರ್ದೇಶನ ಮಾಡಿದ್ದರೆ, ಟೈಗರ್ ಶ್ರಾಫ್ ಇದರ ಹೀರೋ ಆಗಿದ್ದರು. ಅದರಲ್ಲಿ ಬಿಗ್ ಬಿ ಪ್ರಮುಖ ಪಾತ್ರ ಮಾಡಿದ್ದರು. 190 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾವು ಕಲೆಕ್ಷನ್ ಮಾಡಿದ್ದು 15+ ಕೋಟಿ ರೂ. ಮಾತ್ರ ಗಳಿಸಿದೆ.
ಪೂಜಾ ಎಂಟರ್‌ಟೇನ್‌ಮೆಂಟ್ ಸಂಸ್ಥೆ ಚೇತರಿಸಿಕೊಳ್ಳುವುದಕ್ಕೂ ಸಮಯ ನೀಡಲಿಲ್ಲ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ. ಇದರಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ನಟಿಸಿದ್ದರು. 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಕೇವಲ 100 ಕೋಟಿ ರೂ. ಕಲೆಕ್ಷನ್ ಮಾಡೋದ್ರಲ್ಲಿ ಸೋಸಿತ್ತು. ಈ ಪರಿಣಾಮ, ಭಗ್ನಾನಿ ಕುಟುಂಬವು ಈಗ ಸಂಕಷ್ಟ ಎದುರಿಸುತ್ತಿದೆ.
ಅದಕ್ಕಾಗಿ ಪೂಜಾ ಎಂಟೈನ್‌ಮೆಂಟ್ ಸಂಸ್ಥೆಯ 7 ಅಂತಸ್ತಿನ ಕಚೇರಿಯನ್ನೇ ಮಾಡಲಾಗಿದೆ ಎನ್ನಲಾಗಿದೆ. ಇದಷ್ಟೇ ಅಲ್ಲ, 80% ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಇದುವರೆಗೂ ಮಾಡಿದ ಕೆಲಸಕ್ಕೆ 2 ತಿಂಗಳಿನಿಂದ ಉದ್ಯೋಗಿಗಳಿಗೆ ಸರಿಯಾದ ಸಂಬಳ ನೀಡಿಲ್ಲ. ಇದರಿಂದ ನೌಕರರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಗೆ ಹಾಕಿದ್ದಾರೆ. ಭಗ್ನಾನಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ.