ಬೆಂಗಳೂರು: ಸ್ಯಾಂಡಲ್‍ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಅವರಿಗೆ ತಮ್ಮ ಪತಿ ಪ್ರೇಮ್ ಅವರ ಚಿತ್ರದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಮಾಧ್ಯಮದ ಮೇಲೆ ಗರಂ ಆಗಿದ್ದಾರೆ.
ನಿರ್ದೇಶಕ ಮಹೇಶ್ ಬಾಬು ಅವರ ಹೊಸ ಸಿನಿಮಾ ಪೂಜೆಗೆ ರಕ್ಷಿತಾ ಪ್ರೇಮ್ ಆಗಮಿಸಿದ್ದರು. ಈ ವೇಳೆ ಮಾಧ್ಯಮದವರು ಪ್ರೇಮ್ ಅವರು ಆರು ಜನ ಸ್ಟಾರ್ ಗಳನ್ನು ಹಾಕಿಕೊಂಡು ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ಆಗ ರಕ್ಷಿತಾ ಅವರು, ಸ್ಟುಪಿಡ್ ಪ್ರಶ್ನೆಗೆ ಆನ್ಸರ್ ಮಾಡಲ್ಲ. ಆ ಸಿನಿಮಾ ಬಗ್ಗೆ ಪ್ರೇಮ್‍ನ ಕೇಳಿ. ‘ದಿ-ವಿಲನ್’ ಸಿನಿಮಾ ಟೈಮ್‍ನಲ್ಲಿ ನಮಗೆ ತುಂಬಾ ಬೇಜಾರ್ ಆಗಿದೆ. ಸಿನಿಮಾ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಹೇಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ನಮ್ಮ ಫ್ಯಾಮಿಲಿನಾ ಟಾರ್ಗೆಟ್ ಮಾಡಿ ಟ್ರೋಲ್ ಮಾಡುವುದು ಸರಿಯಲ್ಲ. ಟ್ರೋಲ್ ಪೇಜ್ ಟ್ವೀಟ್ ಹಾಗೂ ಕೆಲವರು ಮಾತನಾಡಿರುವುದನ್ನು ನೋಡಿ ನಮಗೆ ಪರ್ಸನಲಿ ಸಿಕ್ಕಾಪಟ್ಟೆ ಬೇಜಾರ್ ಆಗಿದೆ ಎಂದು ಟ್ರೋಲ್ ಮಾಡಿದವರ ಕೋಪವನ್ನು ರಕ್ಷಿತಾ ಮಾಧ್ಯಮದವರ ಮೇಲೆ ತೋರಿಸಿದ್ದಾರೆ.
ದಿ-ವಿಲನ್ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಹಿನ್ನೆಲೆಯಲ್ಲಿ ನಿರ್ದೇಶಕ ಪ್ರೇಮ್ ಅವರು ಡಿಸಿಪಿ ರವಿ ಚನ್ನಣ್ಣನವರ್ ಅವರ ಕಚೇರಿಗೆ ಹೋಗಿ ದೂರು ಸಲ್ಲಿಸಿದ್ದರು. ನಟಿ ರಕ್ಷಿತಾ ಮತ್ತು ಪ್ರೇಮ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ ಆರೋಪದ ಮೇರೆಗೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹೋಗಿ ನಿರ್ದೇಶಕ ಪ್ರೇಮ್ ದೂರು ನೀಡಿದ್ದರು. ದಿ ವಿಲನ್ ಸಿನಿಮಾದ ಬಗ್ಗೆ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವು ಕಿಡಿಗೇಡಿಗಳು ನನ್ನ ಮತ್ತು ನನ್ನ ಕುಟುಂಬದವರ ಬಗ್ಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಾರೆ ಎಂದು ನಿರ್ದೇಶಕ ಪ್ರೇಮ್ ದೂರಿನಲ್ಲಿ ಉಲ್ಲೇಖಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv