ಸ್ಯಾಂಡಲ್‌ವುಡ್ ನಟಿ ರಕ್ಷಿತಾ ಪ್ರೇಮ್ (Rakshitha Prem) ಸಹೋದರ ರಾಣಾ (Raana) ಅವರು ಸಿಂಪಲ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ‘ಏಕ್ ಲವ್ ಯಾ’ (Ek Love Ya) ನಟ ರಾಣಾ ನಿಶ್ಚಿತಾರ್ಥದ ಫೋಟೋವನ್ನು ರಕ್ಷಿತಾ ಪ್ರೇಮ್ ಶೇರ್ ಮಾಡಿ ಹೊಸ ಜೋಡಿಗೆ ಶುಭಕೋರಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್- ಹೀರೋ ಆಗಿ ಚಿತ್ರರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ
‘ಏಕ್ ಲವ್ ಯಾ’ ಸಿನಿಮಾ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಣಾ ಇದೀಗ ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ರಕ್ಷಿತಾ ಪ್ರೇಮ್ ಮತ್ತು ಕುಟುಂಬಸ್ಥರು ಭಾಗಿಯಾಗಿದ್ದಾರೆ. ಭಾವಿ ಪತ್ನಿ ಜೊತೆಗಿನ ರಾಣಾ ಫೋಟೋ ನೋಡಿ ಫ್ಯಾನ್ಸ್ ಕೂಡ ಶುಭ ಹಾರೈಸಿದ್ದಾರೆ.
ಇನ್ನೂ ರಾಣಾ ಮದುವೆಯಾಗುತ್ತಿರುವ ಹುಡುಗಿಯ ವಿವರ ಇನ್ನಷ್ಟೇ ರಿವೀಲ್ ಆಗಬೇಕಿದೆ. ಮದುವೆ ಕುರಿತು ಮಾಹಿತಿ ಕುಟುಂಬಸ್ಥರು ರಿವೀಲ್ ಮಾಡುವವರೆಗೂ ಕಾಯಬೇಕಿದೆ. ಇದನ್ನೂ ಓದಿ:BBK 11: ತಾಕತ್ತು ಇದ್ದರೆ ತಡೆಯಿರಿ ನೋಡೋಣ- ಶಿಶಿರ್‌ಗೆ ಚೈತ್ರಾ ಅವಾಜ್