– ದರ್ಶನ್‌ಗೋಸ್ಕರ ವಿಜಯಲಕ್ಷ್ಮಿ ತುಂಬಾ ಕಷ್ಟಪಟ್ಟಿದ್ದಾರೆ ಎಂದ ನಟಿ
ಬೆಂಗಳೂರು: ದರ್ಶನ್ ಹಾಗೂ ಪ್ರೇಮ್ (Darshan-Prem) ಸಿನಿಮಾ ಮಾಡೇ ಮಾಡ್ತಾರೆ, ಅದರ ಬಗ್ಗೆ ಡೌಟೇ ಇಲ್ಲ ಅಂತ ನಟಿ ರಕ್ಷಿತಾ (Rakshita) ಹೇಳಿದರು.
ಬೆಂಗಳೂರಿನಲ್ಲಿ (Bengaluru) ಕಾರ್ಯಕ್ರಮವೊಂದರ ವೇಳೆ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಅವರು, ದರ್ಶನ್ ಹಾಗೂ ಪ್ರೇಮ್ ಸಿನಿಮಾ ಮಾಡ್ತಾರೆ ಅದ್ರ ಬಗ್ಗೆ ಡೌಟೇ ಇಲ್ಲ. ಯಾವ ಬ್ಯಾನರ್ ಅನ್ನೋದು ಮ್ಯಾಟರ್ ಆಗಲ್ಲ ಎಂದರು. ಇದನ್ನೂ ಓದಿ: ಡಾಲಿ ನಿರ್ಮಾಣದ ‘ವಿದ್ಯಾಪತಿ’ಗೆ ಕೆಜಿಎಫ್ ವಿಲನ್ ಎಂಟ್ರಿ- ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್
ಇದೇ ವೇಳೆ ದರ್ಶನ್‌ಗೆ ಮಗನ ಮದುವೆ ಬರುವಂತೆ ಇನ್ವಿಟೇಷನ್ ಕೊಟ್ಟಿದ್ದೀನಿ. ರಾಣಾನ ಚಿಕ್ಕವನಿದ್ದಾಗಿಂದ ದರ್ಶನ್ ನೋಡಿದ್ದಾನೆ. ಮದುವೆಗೆ ಬರ್ತೀನಿ ಅಂತ ಹೇಳಿದ್ದಾನೆ ಎಂದರು. ಇದನ್ನೂ ಓದಿ: ಸೈಫ್ ಅಲಿ ಖಾನ್ ಪುತ್ರನ ಸಿನಿಮಾಗೆ ಟೈಟಲ್ ಫಿಕ್ಸ್- ಪೋಸ್ಟರ್ ಔಟ್
ಇನ್ನೂ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಮಾತನಾಡಿದ ರಕ್ಷಿತಾ, ಅದೊಂದು ಕೆಟ್ಟಗಳಿಗೆ ಅದರಿಂದ ಆಚೆ ಬರಲಿ. ನನಗೆ ಅವ್ನು ಯಾವಾಗಲೂ ಫ್ಯಾಮಿಲಿನೇ. ನನ್ನ ಅಕ್ಕಪಕ್ಕದ ಜನ ಚನಾಗಿದ್ರೆ ನಾನು ಚನಾಗಿರ್ತೀನಿ ಅಂತಾ ನಾನು ಅನ್ಕೋತಿನಿ. ದರ್ಶನ್‌ಗೆ ಅವನ ಫ್ಯಾಮಿಲಿನೇ ದೊಡ್ಡ ಶಕ್ತಿ. ಅವನಿಗೋಸ್ಕರ ವಿಜಯಲಕ್ಷ್ಮೀ ತುಂಬಾ ಕಷ್ಟ ಪಟ್ಟಿದ್ದಾರೆ ಎಂದು ತಿಳಿಸಿದರು.
ಸೋಶಿಯಲ್ ಮೀಡಿಯಾ ಒಳ್ಳೆದಕ್ಕೂ ಇದೆ ಕೆಟ್ಟದಕ್ಕೂ ಇದೆ. ನಾನೇನಾದ್ರು ಹೇಳ್ಬೇಕು ಅಂದ್ರೆ ಜಾಲತಾಣದಲ್ಲಿ ಹಾಕ್ತಿನಿ. ನನಗೆ ಗೊತ್ತಿರೋ ಪ್ರಕಾರ ಪ್ರೇಮ್ ದರ್ಶನ್ ಸಿನಿಮಾ ಮಾಡ್ತಾರೆ. ಬ್ಯಾನರ್ ಯಾವ್ದು ಅನ್ನೋದು ಮ್ಯಾಟರ್ ಆಗೋಲ್ಲ. ಯಾವುದೇ ಬ್ಯಾನರ್ ಅದ್ರೂ ಸಿನಿಮಾ ಮಾಡೇ ಮಾಡ್ತಾರೆ ಎಂದು ರಕ್ಷಿತಾ ಹೇಳಿದರು. ಇದನ್ನೂ ಓದಿ: ನಂಬಿಕೆ, ತಾಳ್ಮೆ ಇರಬೇಕು.. ಟೈಂ ತಗೊಂಡ್ರೂ ನಿಜ ಯಾವತ್ತೂ ಆಚೆ ಬರುತ್ತೆ: ರಾಗಿಣಿ