ರಕ್ಷಿತಾ ಅವ್ರ ಈ ಬೇಡಿಕೆಯನ್ನು ಈಡೇರಿಸ್ತಾರಾ ಚಾಲೆಂಜಿಂಗ್ ಸ್ಟಾರ್

Public TV
1 Min Read
rakshita darshan

ಬೆಂಗಳೂರು: ಸ್ಯಾಂಡಲ್‍ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ.

ಹೌದು, ದಶಕದ ಹಿಂದೆ ಸ್ಯಾಂಡಲ್‍ವುಡ್ ಆಳಿದ ನಟಿ ರಕ್ಷಿತಾ ನಟ ದರ್ಶನ್ ಗೆ ತಮ್ಮ ಆಸೆಯೊಂದನ್ನು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಮದುವೆಯಾದ ಬಳಿಕ ಹಿರಿತೆರೆಯಿಂದ ದೂರವಾದ ರಕ್ಷಿತಾ ಕಿರುತೆರೆಯಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸದ್ಯ ರಕ್ಷಿತಾ ಅವರು ಖಾಸಗಿ ಚಾನೆಲ್‍ವೊಂದರ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಯಾಲಿಟಿ ಶೋ ಕಾರ್ಯಕ್ರಮದ ಸ್ಪರ್ಧಿಯಾಗಿರುವ ಚೆನ್ನಪ್ಪ ತಾವು ದರ್ಶನ್ ರನ್ನು ಭೇಟಿಯಾಗಬೇಕು ಎಂಬ ಆಸೆಯನ್ನು ರಕ್ಷಿತಾರ ಮುಂದೆ ಹೇಳಿಕೊಂಡಿದ್ದಾರೆ. ಈ ಕುರಿತು ರಕ್ಷಿತಾ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

rakshita

ಪೋಸ್ಟ್ ನಲ್ಲಿ ಏನಿದೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇದು ನನ್ನ ಸ್ಪೆಶಲ್ ರಿಕ್ವೆಸ್ಟ್. ಈ ಫೋಟೋದಲ್ಲಿರುವನು ಚೆನ್ನಪ್ಪ. ಜಿ-ಕನ್ನಡ ಚಾನೆಲ್‍ನ ಸರೆಗಮಪ-11ರ ಸಂಗೀತ ಕಾರ್ಯಕ್ರಮದ ವಿಜೇತನಾಗಿದ್ದು ಜೊತೆಗೆ ಒಳ್ಳೆಯ ಡ್ಯಾನ್ಸರ್. ನಿಮಗೆ ಕೋಟ್ಯಾಂತರ ಅಭಿಮಾನಿಗಳಿರುವುದು ನನಗೆ ಗೊತ್ತಿದೆ. ಆ ಅಭಿಮಾನಿಗಳಲ್ಲಿ ಈ ಚೆನ್ನಪ್ಪ ಕೂಡ ಒಬ್ಬನಾಗಿದ್ದಾನೆ. ನಿಮ್ಮನ್ನು ಭೇಟಿಯಾಗುವುದು ಚೆನ್ನಪ್ಪನ ಜೀವನದ ಗುರಿಯಾಗಿದೆ. ಪ್ಲೀಸ್ ದಯವಿಟ್ಟು ಈತನನ್ನು ಭೇಟಿಯಾಗಿ ಎಂದು ರಕ್ಷಿತಾ ಅವರು ಬರೆದುಕೊಂಡಿದ್ದಾರೆ.

ದರ್ಶನ್ ಮತ್ತು ರಕ್ಷಿತಾ ಅಭಿನಯಸಿದ್ದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗಿವೆ. ಹೀಗಾಗಿ ರಕ್ಷಿತಾ ಮತ್ತು ದರ್ಶನ್ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದಾರೆ. ಕಲಾಸಿಪಾಳ್ಯ, ಸುಂಟರಾಗಾಳಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ದರ್ಶನ್ ಮತ್ತು ರಕ್ಷಿತಾ ಜೊತೆಯಾಗಿ ನಟಿಸಿದ್ದಾರೆ.

25 1506327389 2copy

Share This Article
Leave a Comment

Leave a Reply

Your email address will not be published. Required fields are marked *