ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್‍ರವರು ಇಂದು 34 ವಸಂತಕ್ಕೆ ಕಾಲಿಟ್ಟಿದ್ದು, ಇದೀಗ ಸ್ಯಾಂಡವುಡ್‍ನ ನಟರ ಶುಭಾಶಯಗಳ ಮಹಾಪೂರಗಳೇ ಹರಿದುಬರುತ್ತಿದೆ.
ಹುಟ್ಟುಹಬ್ಬದ ಪ್ರಯುಕ್ತ ನಟಿಗೆ ನವರಸ ನಾಯಕ ಜಗ್ಗೇಶ್‍ರವರು ಟ್ಟಿಟ್ಟರ್‍ನಲ್ಲಿ ವಿಶ್ ಮಾಡಿದ್ದಾರೆ. “ಹುಟ್ಟು ಹಬ್ಬಕ್ಕೆ ಶುಭಾಶಯಗಳು ನನ್ನ ಸಹಪಾಟಿಗೆ. ಮೈತೂಕ ಇಳಿಸಿಕೊಂಡರೆ ಇಂದಿನ ನಟಿಯರಿಗೆ ಮುಲಾಜಿಲ್ಲದೆ ಪಕ್ಕಕ್ಕೆ ತಳ್ಳುವ ಪ್ರತಿಭೆಯಿದೆ ಈಕೆಗೆ.. ನನ್ನ ಪ್ರಕಾರ ಸೋಮಾರಿತನ ಬಿಡಬೇಕು ಅಷ್ಟೇ.ಮುದ್ದಿನ ಪತಿ, ಮಗನ ಹಾರೈಕೆ ಇದಕ್ಕೆ ಕಾರಣ. ಪ್ರೇಮ್ ನಿನ್ನ ಜೊತೆ ದಿನ ಓಟ ಶುರುಮಾಡಿಸಿ. ಅದ್ಭುತ ಹೆಣ್ಣು ಮಗಳು” ಎಂದು ಟ್ವೀಟ್ ಮಾಡಿ ಶುಭಕೋರಿದ್ದಾರೆ.
ಪತಿ ಪ್ರೇಮ್‍ರವರು ಕೂಡ ಶುಭ ಹಾರೈಸಿದ್ದು “ಹಾಯ್ ಡುಮ್ಮಿ ಮೇಡಂ ವಿಶ್ ಯೂ ಹ್ಯಾಪಿ ಬರ್ತ್ ಡೇ ನೂರು ವರ್ಷ ಚೆನ್ನಾಗಿರಿ” ಎಂದು ಬರೆದು ವಿಶ್ ಮಾಡಿದ್ದಾರೆ.
31 ಮಾರ್ಚ್ 1984ರಲ್ಲಿ ಜನಿಸಿರುವ ಕ್ರೇಜಿ ಕ್ವೀನ್ ರಕ್ಷಿತಾ ಅವರು 2002ರಲ್ಲಿ ‘ಅಪ್ಪು’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್‍ಗೆ ಪಾದಾರ್ಪಣೆ ಮಾಡಿದ್ದು, 2007ರಲ್ಲಿ “ತಾಯಿಯ ಮಡಿಲು” ಇವರ ಕೊನೆಯ ಸಿನಿಮಾವಾಗಿದೆ. ತಮಿಳು, ಮತ್ತು ತೆಲುಗು ಭಾಷೆಗಳಲ್ಲಿಯೂ ಇವರು ನಟಿಸಿದ್ದಾರೆ. ಬಳಿಕ ರಾಜಕೀಯರಂಗವನ್ನು ಕೂಡ ಪ್ರವೇಶಿಸಿದ್ದು, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗುವ ಮೂಲಕ ಕನ್ನಡ ನಾಡಿನಲ್ಲಿ ಮನೆಮಾತಾಗಿದ್ದಾರೆ.
Wish u happy birthday my sweetheart god blz love u ❤️ pic.twitter.com/6PihYOb03P
— PREM❣️S (@directorprems) March 30, 2018