ಬೆಂಗಳೂರು: ಇತ್ತೀಚೆಗೆ ಭಾರತದ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಹೀಗಿರುವಾಗ ನಟಿ ರಾಗಿಣಿ ದ್ವಿವೇದಿ ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಿಚ್ಚು ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಗಿಣಿ, ಕಾಸ್ಟಿಂಗ್ ಕೌಚ್ ನಟಿಯರ ವಿಚಾರಕ್ಕೆ ಬಿಟ್ಟಿದ್ದು ಅವರ ವಯಕ್ತಿಕ ವಿಚಾರ. ಆದರೆ ನನಗೆ ಯಾವುದೇ ಅನುಭವವಾಗಿಲ್ಲ. ಒಂದು ಕೈಯಿಂದ ಚಪ್ಪಾಳೆ ಆಗಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗೊದು ಎಂದು ಹೇಳಿದ್ದಾರೆ.
ಆದರೆ ನಟಿಯರನ್ನು ಮಂಚಕ್ಕೆ ಕರೆಯೊದು ಕೆಟ್ಟ ಸಂಸ್ಕೃತಿ ಎಂದು ನಟಿ ರಾಗಿಣಿ ತಿಳಿಸಿದರು.
ಇತ್ತೀಚೆಗೆ ನಡೆದ ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್‍ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹರ್ಷಿಕಾ ಪೂಣಚ್ಚ ಮಾತನಾಡಿದ್ದರು. ಬಾಲಿವುಡ್ ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ಹೇಳಿದ್ದರು. ಅಲ್ಲದೇ ಬಾಲಿವುಡ್‍ನಲ್ಲಿ ನಾನು ಎರಡು ದೊಡ್ಡ ಸಿನಿಮಾಗಳನ್ನು ಮಾಡಬೇಕಿತ್ತು. ಕಾಸ್ಟಿಂಗ್ ಕೌಚ್ ಕಾರಣದಿಂದಾಗಿ ಸಿನಿಮಾ ಬಾಲಿವುಡ್ ಸಿನಿಮಾ ಬಿಟ್ಟು ಹೊರ ಬಂದಿದ್ದೇನೆ ಎಂದು ನಟಿ ಹರ್ಷಿಕಾ ಪೂಣಚ್ಚ ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್ ವೇಳೆ ಅನುಭವವನ್ನು ಹಂಚಿಕೊಂಡಿದ್ದರು.