ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಆಗಿದ್ದ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಜೂನ್ 7ರಂದು ಡಿವೋರ್ಸ್ ಘೋಷಿಸುವ ಮೂಲಕ ಫ್ಯಾನ್ಸ್ ಶಾಕ್ ಕೊಟ್ಟಿದ್ದಾರೆ. ಹೀಗಿರುವಾಗ ಚಂದನ್ ಮತ್ತು ನಿವೇದಿತಾ ವಿಚ್ಛೇದನದ ಬಗ್ಗೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಮೃಣಾಲ್‌ಗೆ ಬೇಡಿಕೆ- ತಮಿಳಿನತ್ತ ‘ಸೀತಾರಾಮಂ’ ನಟಿ
ಚಂದನ್ ಮತ್ತು ನಿವೇದಿತಾ ಕಾನೂನು ಬದ್ಧವಾಗಿ ಡಿವೋರ್ಸ್ ಪಡೆದ ಬೆನ್ನಲ್ಲೇ ರಾಗಿಣಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ವೈಯಕ್ತಿಕ ವಿಚಾರಕ್ಕೆ ನಾನು ಕಾಮೆಂಟ್ ಮಾಡಲ್ಲ. ಲೈಫ್ ಇಸ್ ನಾಟ್ ಈಸಿ ಜೀವನದಲ್ಲಿ ಏರಿಳಿತಗಳು ಇರುತ್ತವೆ. ನಾವೇನು ಕಾಂಟ್ರುಬ್ಯೂಟ್ ಮಾಡದೇ ಹೋದರೆ ನಾವೇನು ಕಾಮೆಂಟ್ ಮಾಡೋಕೆ ಹೋಗಬಾರದು ಎಂದು ನಟಿ ಮಾತನಾಡಿದ್ದಾರೆ.
ಅಂದಹಾಗೆ, ‘ಬಿಗ್ ಬಾಸ್ ಕನ್ನಡ ಸೀಸನ್ 5’ರಲ್ಲಿ ಇಬ್ಬರೂ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.