ಸ್ವಿಮ್ ಸೂಟ್ ಧರಿಸಿ ನೀರಿಗಿಳಿದ ರಾಗಿಣಿ

Public TV
1 Min Read
ragini 1

ನ್ನಡದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಾರೆ. ಸ್ವಿಮ್‌ ಸೂಟ್‌ ಧರಿಸಿ ಹಾಟ್ ಅವತಾರ ತಾಳಿದ ರಾಗಿಣಿ ಕಂಡು ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ:ಪ್ಯಾರಿಸ್‌ನಲ್ಲಿ ಸ್ಟೈಲೀಶ್ ಲುಕ್‌ನಲ್ಲಿ ಕಾಣಿಸಿಕೊಂಡ ಐಶ್ವರ್ಯಾ ರೈ- ನೆಟ್ಟಿಗರ ಕಾಮೆಂಟ್‌ಗಳ ಸುರಿಮಳೆ

ragini 3

ಮತ್ತೆ ಹೊಸ ಫೋಟೋಶೂಟ್‌ನಿಂದ ರಾಗಿಣಿ ಸುದ್ದಿಯಲ್ಲಿದ್ದಾರೆ. ಸ್ವಿಮ್ ಸೂಟ್ ಧರಿಸಿ ನಟಿ ನೀರಿಗಿಳಿದಿದ್ದಾರೆ. ಕಪ್ಪು ಬಣ್ಣದ ಸ್ವಿಮ್ ಸೂಟ್‌ನಲ್ಲಿ ನಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಈ ಲುಕ್‌ಗೆ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ragini 4

ಕನ್ನಡ ಸಿನಿಮಾಗಳ ಜೊತೆ ಪರಭಾಷೆಗಳಲ್ಲಿಯೂ ನಟಿ ಬ್ಯುಸಿಯಾಗಿದ್ದಾರೆ. ಜೊತೆಗೆ ‘ವೃಷಭ’ ಎಂಬ ಸಿನಿಮಾದಲ್ಲಿ ಮೋಹನ್ ಲಾಲ್‌ (Mohanlal) ಜೊತೆ ರಾಗಿಣಿ ನಟಿಸಿದ್ದಾರೆ. ಈ ಚಿತ್ರಕ್ಕೆ ನಂದಕಿಶೋರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ:‘ದೇವರ’ ರಿಲೀಸ್‌ಗೂ ಮುನ್ನವೇ ಟಿಕೆಟ್ ಸೋಲ್ಡ್ ಔಟ್- ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಭಾರೀ ಬೇಡಿಕೆ

ragini 2

ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟನೆಯ ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ರಾಗಿಣಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ಭಾರೀ ಸ್ಕೋಪ್ ಇದೆ.

ragini 5

ಇನ್ನೂ ಸುದೀಪ್ (Sudeep) ನಟನೆಯ ವೀರಮದಕರಿ, ಕೆಂಪೇಗೌಡ ಚಿತ್ರದಲ್ಲಿನ ರಾಗಿಣಿ ನಟನೆಯನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಇದರ ಜೊತೆಗೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಗಿಣಿ ನಟಿಸಿದ್ದಾರೆ.

ಕನ್ನಡ, ತಮಿಳು, ತೆಲುಗು, ಬಾಲಿವುಡ್ ಸೇರಿದಂತೆ ಮಲಯಾಳಂನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೊಸ ನಟಿಯರ ನಡುವೆ ರಾಗಿಣಿ ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ.

Share This Article