ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದ್ದ ರಾಗಿಣಿ ದ್ವಿವೇದಿಗೆ (Ragini Dwivedi) ಮತ್ತೆ ಅದೃಷ್ಟ ಖುಲಾಯಿಸಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:‘ಆಪರೇಷನ್ ಸಿಂಧೂರ’ ಟೈಟಲ್‌ಗೆ ಬೇಡಿಕೆ- ರಿಜಿಸ್ಟರ್ ಮಾಡಲು ಮುಗಿಬಿದ್ದ ನಿರ್ಮಾಪಕರು
ಚಿತ್ರರಂಗದಲ್ಲಿ ರಾಗಿಣಿಗೆ ಬೇಡಿಕೆ ಹೆಚ್ಚಾಗಿದೆ. ಬಹುಭಾಷೆಗಳಲ್ಲಿ ನಟಿಸುತ್ತಾ ನಟಿ ಆಕ್ಟೀವ್ ಆಗಿದ್ದಾರೆ. ಧರ್ಮ ಕೀರ್ತಿರಾಜ್ ಜೊತೆ ಸಿಂಧೂರಿ (Sindhori) ಚಿತ್ರ, ಸರ್ಕಾರಿ ನ್ಯಾಯ ಬೆಲೆ ಅಂಗಡಿ, ರಾಜವರ್ಧನ್ ಜೊತೆ ‘ಜಾವಾ’ ಚಿತ್ರದಲ್ಲಿ ನಟಿಸುತ್ತಿದ್ದು, ಇದಕ್ಕೆ ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡಲಿದ್ದಾರೆ.
ಮೋಹನ್ ಲಾಲ್ (Mohan Lal) ಜೊತೆ ‘ವೃಷಭ’ ಸಿನಿಮಾ ಮಾಡ್ತಿದ್ದಾರೆ ರಾಗಿಣಿ. ಈ ಚಿತ್ರಕ್ಕೆ ಕನ್ನಡದ ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡಿದ್ದಾರೆ. ಇದರೊಂದಿಗೆ ಬಾಲಿವುಡ್ ಚಿತ್ರ ಮತ್ತು ತಮಿಳಿನಲ್ಲೊಂದು ಸಿನಿಮಾ ಮುಗಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ:ತಮಿಳು ಚಿತ್ರದಲ್ಲಿ ಸೊಂಟ ಬಳುಕಿಸಿದ ತನಿಷಾ ಕುಪ್ಪಂಡ – ಬೆಂಕಿ ಡ್ಯಾನ್ಸ್ ಎಂದ ಫ್ಯಾನ್ಸ್
‘ಶ್ಲೋಕ್’ ಎಂಬ ಸಂಸ್ಕೃತ ಚಿತ್ರದಲ್ಲಿಯೂ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಕ್ತಿಯನ್ನು ಹೊಂದುವ ಸನ್ಯಾಸಿನಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಇದನ್ನು ಸ್ಮಶಾನದಲ್ಲಿ ಚಿತ್ರೀಕರಿಸಲಾಗಿದೆ. ಒಟ್ನಲ್ಲಿ ರಾಗಿಣಿ ಕಹಿ ಘಟನೆಯಿಂದ ಹೊರಬಂದು ಸಿನಿಮಾ ಮಾಡ್ತಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಒಂದೊಳ್ಳೆಯ ಕಾಲ ಶುರುವಾಗಿದೆ. ಒಪ್ಪಿಕೊಂಡಿರುವ ಈ ಸಿನಿಮಾಗಳಿಂದ ಸಕ್ಸಸ್ ಸಿಗುತ್ತಾ? ಎಂದು ಕಾದುನೋಡಬೇಕಿದೆ.