ಸ್ಯಾಂಡಲ್‌ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಕನ್ನಡದ ಜೊತೆ ಪರಭಾಷಾ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ‘ಬಿಗ್ ಬಾಸ್’ (Bigg Boss Kannada 7) ಖ್ಯಾತಿಯ ಕಿಶನ್ ಬಿಳಗಲಿ (Kishen Bilagali) ಜೊತೆ ರಾಗಿಣಿ ರೈನ್ ಡ್ಯಾನ್ಸ್ ಮಾಡಿದ್ದಾರೆ. ಕಿಶನ್ ಜೊತೆಗಿನ ಡ್ಯುಯೇಟ್ ವಿಡಿಯೋವನ್ನು ರಾಗಿಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಸರ್ಫರೋಶ್’ ಸಿನಿಮಾದ ಹಾಡಿಗೆ ರಾಗಿಣಿ ಮತ್ತು ಕಿಶನ್ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ‘ಜೋ ಹಲ್ ದಿಲ್ ಕಾ’ ಎಂಬ ಹಾಡಿಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ರಾಗಿಣಿ ರೆಡ್ ಕಲರ್ ಡ್ರೆಸ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಶನ್ ಕಪ್ಪು ಬಣ್ಣದ ಉಡುಗೆ ಧರಿಸಿದ್ದಾರೆ. ಇದನ್ನೂ ಓದಿ:‘ಹಲಗಲಿ’ ಸಿನಿಮಾದಿಂದ ಹೊರ ಬಂದ ಡಾರ್ಲಿಂಗ್ ಕೃಷ್ಣ
ರಾಗಿಣಿ ಮತ್ತು ಕಿಶನ್ ರೈನ್ ಡ್ಯಾನ್ಸ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಬಾಲಿವುಡ್ ಕಲಾವಿದರನ್ನು ಮೀರಿಸುವಂತಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಸ್’ ಸಿನಿಮಾದಲ್ಲಿ ಹುಮಾ ಖುರೇಶಿ
ಮೋಹನ್ ಲಾಲ್ ಜೊತೆ ‘ವೃಷಭ’ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರಾಗಿಣಿ ಕೈಯಲ್ಲಿವೆ. ಈ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.