ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್‍ವುಡ್ ಕ್ವೀನ್ ರಾಧಿಕಾ ಪಂಡಿತ್ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಹಾಗಾಗಿ ಪತಿಗೆ ಪ್ರೀತಿಯ ಶುಭಾಶಯವನ್ನು ರಾಧಿಕಾ ತಿಳಿಸಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ಪತಿ ಯಶ್ ಗೆ ತಿಳಿಸಿದ್ದಾರೆ. ತಮ್ಮ ಫೇಸ್‍ಬುಕ್ ನಲ್ಲಿ ಎರಡು ಫೋಟೋ ಪೋಸ್ಟ್ ಮಾಡಿದ್ದು, “ಎರಡು ವರ್ಷದ ಹಿಂದೆ ಹೀಗಿದ್ದೆವು. ಇಂದು ಹೀಗಿದ್ದೇವೆ. ನಮ್ಮ ಜೀವನದ ಹೊಸ ಪ್ರಯಾಣಕ್ಕೆ ಸಿದ್ಧವಾಗಿದ್ದೇವೆ. ನನ್ನ ಪ್ರೀತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.
Advertisement
Advertisement
ರಾಧಿಕಾ ಅವರು ಮೊದಲಿಗೆ ತಮ್ಮ ಮದುವೆಯ ಫೋಟೋ ಹಾಗೂ ಅದರ ಪಕ್ಕ ತಮ್ಮ ಸೀಮಂತದ ಫೋಟೋವನ್ನು ಹಾಕಿ ಶುಭಾಶಯವನ್ನು ತಿಳಿಸಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಅವರು 2016 ಡಿಸೆಂಬರ್ 6ರಂದು ತಾಜ್ ವೆಸ್ಟೆಂಡ್ ನಲ್ಲಿ ಅದ್ದೂರಿಯಾಗಿ ಗುರು-ಹಿರಿಯರು, ಸ್ನೇಹಿತರ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
Advertisement
ರಾಧಿಕಾ ಅವರ ಸೀಮಂತವನ್ನು ಕೂಡ ತಾಜ್ ವೆಸ್ಟೆಂಡ್ ನಲ್ಲಿ ಕುಟುಂಬಸ್ಥರು ಅದ್ಧೂರಿಯಾಗಿ ಮಾಡಿದ್ದರು. ಡಿಸೆಂಬರ್ 2 ರಂದು ರಾಧಿಕಾ ಪಂಡಿತ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕಳೆದ ವರ್ಷದ ಮದುವೆ ವಾರ್ಷಿಕೋತ್ಸವದ ಆಚರಣೆಗೆ ಈ ಜೋಡಿ ವಿದೇಶಕ್ಕೆ ಹೋಗಿ ಸುತ್ತಾಡಿಕೊಂಡು ಬಂದಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv