Connect with us

ಪತಿಯನ್ನು ಬಿಟ್ಟು ಒಬ್ಬರೇ ವಿಮಾನ ಹತ್ತಿದ ಮಿಸಸ್ ರಾಮಾಚಾರಿ!

ಪತಿಯನ್ನು ಬಿಟ್ಟು ಒಬ್ಬರೇ ವಿಮಾನ ಹತ್ತಿದ ಮಿಸಸ್ ರಾಮಾಚಾರಿ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಮದುವೆಯಾದ ಹೊಸತರಲ್ಲಿ ಒಟ್ಟೊಟ್ಟಿಗೆ ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದರು. ವರ್ಷಕಳೆದರೂ ಒಬ್ಬೊಬ್ಬರನ್ನು ಬಿಟ್ಟು ಸುತ್ತಾಡ್ತಿರಲಿಲ್ಲ. ಅಷ್ಟೊಂದು ಅನ್ಯೋನ್ಯತೆ ಅವರಲ್ಲಿದೆ. ಆದ್ರೆ ದಿಢೀರ್ ಅಂತ ರಾಧಿಕಾ ಪಂಡಿತ್ ಪತಿ ಯಶ್ ಅವರನ್ನ ಬೆಂಗಳೂರಲ್ಲೇ ಬಿಟ್ಟು ಫ್ಲೈಟ್ ಹತ್ತಿ ವಿದೇಶಕ್ಕೆ ಹಾರಿದ್ದಾರೆ.

ಸ್ಯಾಂಡಲ್‍ವುಡ್ ಪರ್ಫೆಕ್ಟ್ ಜೋಡಿ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ. ಯಾವಾಗಲೂ ಜೊತೆಯಾಗಿ ಸುತ್ತಾಡುತ್ತಿದ್ದರು. ಮದುವೆಯಾದ ಮೇಲೆ ಯಶ್ `ಕೆಜಿಎಫ್’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದರು. ರಾಧಿಕಾ ಈಗ ಹೊಸ ಚಿತ್ರದ ಒಂದು ಶೆಡ್ಯೂಲ್ ಶೂಟಿಂಗ್ ಮುಗಿಸಿದ ಮೇಲೆ ರಿಲ್ಯಾಕ್ಸ್ ಆಗೋಕೆ ಯೋಚಿಸಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ರಾಧಿಕಾ ಮದುವೆಯಾದ ಮೇಲೆ ಒಬ್ಬರೇ ವಿದೇಶಕ್ಕೆ ಪ್ರಯಾಣ ಬೆಳಸಿದ್ದು, ಚಿಕಾಗೋಗೆ ಹೋಗಿದ್ದಾರೆ. ಏರ್‍ಫೋರ್ಟ್‍ನಲ್ಲಿ ಒಬ್ಬರೇ ಇದ್ದ ಫೋಟೋ ಕ್ಲಿಕ್ಕಿಸಿ ತಮ್ಮ ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿಕಾಗೋದಲ್ಲಿ ರಾಧಿಕಾ ಅವರ ಸಹೋದರ ಕುಟುಂಬ ನೆಲೆಸಿದೆ. ಹೀಗಾಗಿ ಸಹೋದರನ ಜೊತೆ ಒಂದಿಷ್ಟು ಸಮಯ ಕಳೆಯೋದಕ್ಕಾಗಿ ರಾಧಿಕಾ ವಿದೇಶ ಪ್ರಯಾಣ ಬೆಳೆಸಿದ್ದಾರೆ.

ಯಶ್ ಅಭಿನಯದ ಕೆಜಿಎಫ್ ಸಿನಿಮಾ ಚಿತ್ರೀಕರಣ ಕಾರಣಾಂತರಗಳಿಂದ ಸ್ವಲ್ಪ ದಿನ ಮುಂದಕ್ಕೆ ಹೋಗಿದೆ. ಫೆಬ್ರವರಿ 13ಕ್ಕೆ ಯಶ್ ಕೂಡ ವಿದೇಶಕ್ಕೆ ಹೋಗುತ್ತಾರೆ. ಯಾಕೆಂದರೆ ಈ ವರ್ಷದ ಪ್ರೇಮಿಗಳ ದಿನವನ್ನು ವಿದೇಶದಲ್ಲಿ ಆಚರಣೆ ಮಾಡುವ ಯೋಜನೆಯನ್ನು ಈ ಕ್ಯೂಟ್ ದಂಪತಿ ಮಾಡಿದ್ದಾರೆ ಎನ್ನಲಾಗುತ್ತಿದೆ.

Advertisement
Advertisement