ಬೆಂಗಳೂರು: ನಟಿ ರಾಧಿಕಾ ಪಂಡಿತ್ ಗರ್ಭಿಣಿ ಆದ ಮೇಲೆ ಇದೇ ಮೊದಲ ಬಾರಿಗೆ ತಮ್ಮ ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ರಾಧಿಕಾ ಅವರು ಪತಿ ಯಶ್ ಜೊತೆಗೆ ನಿಂತು ಸೆಲ್ಫಿ ಫೋಟೋ ತೆಗೆದುಕೊಂಡಿದ್ದು, ಅದನ್ನು ಫೇಸ್‍ಬುಕ್ ಮತ್ತು ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಬೇಬಿ ಬಂಪ್ ಫೋಟೋ ಜೊತೆಗೆ ಎರಡು ವರ್ಷದ ಹಿಂದಿನ ನಿಶ್ಚಿತಾರ್ಥದ ಫೋಟೋವನ್ನು ಸಹ ಕೊಲಾಜ್ ಮಾಡಿ ಪೋಸ್ಟ್ ಮಾಡಿದ್ದಾರೆ. “ಆಗಸ್ಟ್ 12 ನಾವು ಎಂಗೇಜ್ ಆಗಿದ್ದೀವಿ. ಇಂದಿಗೆ ಎರಡು ವರ್ಷ ಕಳೆಯಿತು. ಇದು ನಿಜವಾಗಿಯೂ `ಬಂಪಿ ರೈಡ್’ ಆಗಿದೆ ” ಎಂದು ಕಾಮಿಡಿಯಾಗಿ ಬರೆದುಕೊಂಡಿದ್ದಾರೆ.
ಹೌದು ರಾಧಿಕಾ ಪಂಡಿತ್ ಅವರಿಗೆ ಆಗಸ್ಟ್ 12 ರಂದು ಮಹತ್ವದ ದಿನವಾಗಿದೆ. ಯಾಕೆಂದ್ರೆ 2016 ಆಗಸ್ಟ್ 12 ರಂದು ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಗೋವಾದಲ್ಲಿ ರಿಂಗ್ ಬದಲಾಯಿಸಿಕೊಂಡು ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಆದ್ದರಿಂದ ಆಗಸ್ಟ್ 12 ಕ್ಕೆ ಅವರು ನಿಶ್ಚಿತಾರ್ಥ ಮಾಡಿಕೊಂಡು ಎರಡು ವರ್ಷಗಳು ಕಳೆದಿದೆ. ಆ ಖುಷಿಯಲ್ಲಿ ಪತಿ ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಗರ್ಭಿಣಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ.
ರಾಧಿಕಾ ಅವರು ಈ ಫೋಟೋವನ್ನು ತಮ್ಮ ಫೇಸ್‍ಬುಕ್ ಮತ್ತು ಇನ್ಸ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ ಕೂಡಲೇ ಅಭಿಮಾನಿಗಳು ಸಂತಸದಿಂದ ಶುಭ ಹಾರೈಸಿದ್ದಾರೆ. ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಪ್ಪನಾಗುತ್ತಿರುವ ಖುಷಿಯಲ್ಲಿರುವ ಯಶ್ ಅವರಿಗೆ ಕೆಜಿಎಫ್ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿರುವುದಾಗಿ ಅಭಿಮಾನಿಗಳು ತಿಳಿಸಿದ್ದಾರೆ.
2016 ಡಿಸೆಂಬರ್ 9 ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಅಲ್ಲಿ ಈ ಜೋಡಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅರಮನೆ ಮೈದಾನದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಅದ್ಧೂರಿ ಆರತಕ್ಷತೆ ನಡೆದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews