ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಇದೀಗ ಮಕ್ಕಳ ಜೊತೆ ವೆಕೇಷನ್‌ನಲ್ಲಿ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. ಪ್ರವಾಸದ ಸುಂದರ ಕ್ಷಣಗಳ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:4ನೇ ಬಾರಿ ಮದುವೆಗೆ ರೆಡಿಯಾದ ‘ಬಿಗ್ ಬಾಸ್’ ಖ್ಯಾತಿಯ ವನಿತಾ ವಿಜಯ್‌ಕುಮಾರ್
ಕುಟುಂಬದ ಜೊತೆ ವಿವಿಧ ಸ್ಥಳಗಳಿಗೆ ಭೇಟಿ ಕೊಟ್ಟು ರಾಧಿಕಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನೀಲಿ ಬಣ್ಣದ ಡ್ರೆಸ್ ಧರಿಸಿ ರಾಧಿಕಾ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಯಶ್ ಮಾತ್ರ ಕಾಣಿಸಿಕೊಂಡಿಲ್ಲ. ಈ ಫೋಟೋ ನೋಡಿ ಯಶ್ ಎಲ್ಲಿ ಎಂದು ನಟಿಗೆ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಭವಿಷ್ಯದಲ್ಲಿ ಕಾಸ್ಮೆಟಿಕ್ ಸರ್ಜರಿ ಮಾಡಿಸುತ್ತೇನೆ ಎಂದ ನಟಿ ರಾಧಿಕಾ ಮದನ್
ಅಂದಹಾಗೆ, ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಗೆ ಯಶ್ (Yash) ದಂಪತಿ ಹಾಜರಿ ಹಾಕಿದ್ದರು. ಈ ವೇಳೆ, ಯಶ್ ಹೊಸ ಲುಕ್ ಭಾರೀ ವೈರಲ್ ಆಗಿತ್ತು. ಅದರಂತೆ ರಾಧಿಕಾ ಪಂಡಿತ್, ಸೀರೆಯುಟ್ಟು ಸಿಂಪಲ್ ಆಗಿ ಭಾಗಿಯಾಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿತ್ತು.
ಇನ್ನೂ ಕಡೆಯದಾಗಿ ‘ಆದಿ ಲಕ್ಷ್ಮಿ ಪುರಾಣ’ ಎಂಬ ಸಿನಿಮಾದಲ್ಲಿ ರಾಧಿಕಾ ನಟಿಸಿದ್ದರು. ಮತ್ತೆ ಅವರು ನಟನೆಗೆ ಕಮ್ ಬ್ಯಾಕ್ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದು ನಟಿ ಕೂಡ ಭರವಸೆ ನೀಡಿದ್ದಾರೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಸಿಗುತ್ತಾ ಕಾದುನೋಡಬೇಕಿದೆ.