ಚಂದನವನದ ಧ್ರುವತಾರೆ ರಾಧಿಕಾ ಪಂಡಿತ್ (Radhika Pandit) ಚಿತ್ರರಂಗದಿಂದ ದೂರ ಸರಿದಿದ್ದರು ಕೂಡ ಹೊಸ ಬಗೆಯ ಫೋಟೋ ಮೂಲಕ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿರುತ್ತಾರೆ. ಇದೀಗ ಮಗಳು ಐರಾ ಜೊತೆ ರಾಧಿಕಾ ಪಂಡಿತ್ ಚೆಂದದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ.
ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ರಾಧಿಕಾ ಪಂಡಿತ್, ಇದೀಗ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿರುವ ನಟಿ ಆಗಾಗ ತಮ್ಮ ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಈಗ ಮಗಳ ಜೊತೆಗಿನ ಮುದ್ದಾದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಥಮ್ ಮೆಂಟಲಿ ಟಾರ್ಚರ್ ಮಾಡುತ್ತಿದ್ದರು- ಬಿಗ್ ಬಾಸ್ ವಿನ್ನರ್ ಮೇಲೆ ಕಿಡಿಕಾರಿದ ಅಮೂಲ್ಯ
View this post on Instagram
ಅವಳು ತನ್ನ ತಂದೆಯ ನೋಟ, ವರ್ತನೆ ಸಹ ಹೊಂದಿರಬಹುದು. ಆದರೆ ನಾನು ಅವಳಲ್ಲಿ ನನ್ನನ್ನು ನೋಡುತ್ತೇನೆ. ನನ್ನ ಐರಾ ಎಂದು ರಾಧಿಕಾ ಪಂಡಿತ್ ಮಗಳ ಜೊತೆಗಿನ ಫೋಟೋ ಹಂಚಿಕೊಂಡು ತಮ್ಮ ಬಾಲ್ಯದ ಬಗ್ಗೆ ನಟಿ ನೆನಪಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.