ಬೆಂಗಳೂರು: ಮಾವಿನ ಹಣ್ಣಿನ ರೆಸಿಪಿ ತಯಾರಿಸಿ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಪ್ರಶ್ನೆ ಕೇಳಿದ್ದಾರೆ.
ನನಗೆ ಮಾವು ಎಂದರೆ ತುಂಬಾ ಇಷ್ಟ. ಅದರಲ್ಲೂ ಮಾವಿನ ಹಣ್ಣು ಬಳಸಿ ಮಾಡುವ ಅಂಬೆ ಕೊಹ್ಲು ಎನ್ನುವ ಕೊಂಕಣಿ ಶೈಲಿಯ ಪದಾರ್ಥ ಎಂದರೆ ಇನ್ನೂ ಇಷ್ಟ ಎಂದು ಬರೆದು ರಾಧಿಕಾ ಪಂಡಿತ್ ಅಂಬೆ ಕೊಹ್ಲು ಮಾಡಿರುವ ರೆಸಿಪಿಯ ಫೋಟೋವನ್ನು ಫೇಸ್‍ಬುಕ್ ನಲ್ಲಿ ಹಾಕಿದ್ದಾರೆ.
Advertisement
“ನಾನು ಹಾಗೂ ನನ್ನ ಪ್ರೀತಿಯ ಅಂಬೆಕೊಹ್ಲು. ಸಣ್ಣ ಮಾವುಗಳಿಂದ ಈ ಕೊಂಕಣಿ ಡಿಶ್ ಅಂಬೆ ಕೊಹ್ಲುವನ್ನು ತಯಾರಿಸುತ್ತಾರೆ. ನಾನು ಚಿಕ್ಕ ವಯಸ್ಸಿನಿಂದಲೂ ಅಂಬೆ ಕೊಹ್ಲು ತಿನ್ನುತ್ತಾ ಬೆಳೆದಿದ್ದು, ಮಾವಿನ ಹಣ್ಣಿನಲ್ಲಿ ನಿಮಗೆ ಯಾವ ಸ್ಪೆಷಲ್ ಡಿಶ್ ಇಷ್ಟ” ಎಂದು ರಾಧಿಕಾ ಪಂಡಿತ್ ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಈ ಪ್ರಶ್ನೆಗೆ ಅನುಷಾ ಮೋಹಿತ್ ಕಾಮತ್ ಉತ್ತರ ನೀಡಿ ಅಂಬೆ ಕೊಹ್ಲು ನನ್ನ ಫೇವರೆಟ್ ಡಿಶ್. ಮಲೆನಾಡಿನ ಭಾಗದಲ್ಲಿ ನಾವು ಇದ್ದನ್ನು ಅಂಬೆ ಹುಮ್ಮನೆ ಎಂದು ಕರೆಯುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.
Advertisement
ಇನ್ನೂ ಪಾರ್ಥವಿ ಸಾಲಿನ್ ಎಂಬ ಅಭಿಮಾನಿ, “ನನಗೆ ಮಾವಿನಹಣ್ಣು ಚಂಡ್ರುಪುಳಿ ಎಂದರೆ ಇಷ್ಟ. ಸಾಮಾನ್ಯವಾಗಿ ಈ ಡಿಶ್‍ವನ್ನು ಕರಾವಳಿ ಭಾಗಗಳಲ್ಲಿ ತಯಾರಿಸುತ್ತಾರೆ” ಎಂದು ಕಮೆಂಟ್ ಮಾಡಿ ರಾಧಿಕಾ ಪ್ರಶ್ನೆಗೆ ಉತ್ತರಿಸಿದ್ದಾರೆ. ಹೀಗೆ ಹಲವಾರು ಅಭಿಮಾನಿಗಳು ರಾಧಿಕಾ ಪಂಡಿತ್ ಅವರ ಪ್ರಶ್ನೆಗೆ ತಮ್ಮ ಇಷ್ಟವಾದ ಮ್ಯಾಂಗೋ ಡಿಶ್ ಬಗ್ಗೆ ಕಮೆಂಟ್ ಮಾಡುವ ಮೂಲಕ ಉತ್ತರಿಸಿದ್ದಾರೆ.