ಕನ್ನಡ ಚಿತ್ರ ರಂಗದ ಸಿಂಡ್ರೆಲ್ಲ ರಾಧಿಕಾ ಪಂಡಿತ್ (Radhika Pandit) ಸೋಷಿಯಲ್ ಮೀಡಿಯಾದಲ್ಲಿ ಫಾರಿನ್ ಟ್ರಿಪ್ ಹೋಗಿದ್ದ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋಗೆ ನಿಮ್ಮ ಉಪಸ್ಥಿತಿಗೆ ಯಾರು ಬೆಲೆ ಕೊಡ್ತಾರೋ ಅವರನ್ನು ಬಿಟ್ಟು ಹೋಗ್ಬೇಡಿ ಎಂದು ಬರೆದುಕೊಂಡಿದ್ದಾರೆ. ಯಶ್ (Yash) ಪತ್ನಿಯ ನಯಾ ಪೋಸ್ಟ್ ಇದೀಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕಾಂತಾರದ ನಂತರ ‘ಶೈನ್’ ಆದ ಬಿಗ್ ಬಾಸ್ ಶೆಟ್ರು
ಚಂದನವನದ ಪ್ರತಿಭಾನ್ವಿತ ನಟಿ ರಾಧಿಕಾ ವೈಯಕ್ತಿಕ ಜೀವನದಲ್ಲಿ ಅದೆಷ್ಟೇ ಬ್ಯುಸಿ ಇದ್ದರು. ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಸ್ಪಂದಿಸುತ್ತಾರೆ. ಈಗ ಶೇರ್ ಮಾಡಿರುವ ಹೊಸ ಪೋಸ್ಟ್‌ಗೆ ಕೆಲವರು ಹೇಗಿದ್ದೀರಾ ರಾಧಿಕಾ, ಎಲ್ಲ ಸರಿ ಇದೆ ತಾನೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಫೋಟೋ ಮತ್ತು ಲೈನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ವಾವ್ಹ್ ಎಂದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು, ರಾಕಿ ಭಾಯ್ ಕಡೆಯಿಂದ ಮುಂದಿನಿ ಸಿನಿಮಾದ ಅಪ್ಡೇಟ್ ಸಿಗ್ಲಿಲ್ಲ, ಅತ್ತಿಗೆ ಕಡೆಯಿಂದನಾದ್ರು ಸಿಗುತ್ತಾ ಎಂದು ಪ್ರಶ್ನಿಸಿದ್ದಾರೆ. ಅತ್ತಿಗೆ Yash 19 ಯಾವಾಗಾ?? ಅಪ್ಡೇಟ್ ಕೊಡಿ ಪ್ಲೀಸ್ ಅಂತೆಲ್ಲಾ ರಾಧಿಕಾ ಪಂಡಿತ್‌ಗೆ ಕಾಮೆಂಟ್ ಮಾಡಿ ರಿಕ್ವೆಸ್ಟ್ ಮಾಡ್ಕೊಂಡಿದ್ದಾರೆ.
View this post on Instagram
ಒಬ್ಬ ಅಭಿಮಾನಿಯಂತು ಒಂದೆಜ್ಜೆ ಮುಂದೆ ಹೋಗಿ ಮೇ ತಿಂಗಳು ಮುಗಿಯೋದ್ರೊಳಗೆ ಅಪ್ಡೇಟ್ ಕೊಡ್ಲಿಲ್ಲ ಅಂದ್ರೆ ವಿಷ ತಗೊತೀನಿ ಅತ್ತಿಗೆ ಎಂದು ಬರೆದಿದ್ದಾನೆ. ಅದೇನೇ ಇರಲಿ, ರಾಧಿಕಾ ಪಂಡಿತ್ ಹೇಳಿರುವಂತೆ ನಿಮ್ಮ ಇರುವಿಕೆಗೆ ಬೆಲೆಕೊಟ್ಟು, ಸದಾ ಖುಷಿ ಪಡೋ ಜೀವಗಳನ್ನು ಬಿಟ್ಟು ದೂರಾಗ್ಬೇಡಿ ಎಂಬ ಸಾಲುಗಳ ಮೂಲಕ ನಟಿ ಒಂದೊಳ್ಳೆ ಸಂದೇಶ ನೀಡಿದ್ದಾರೆ.