ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಅವರು ವೈಯಕ್ತಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದಾರೆ. ಅದೆಷ್ಟೇ ಬ್ಯುಸಿಯಾಗಿದ್ರೂ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ನಟಿ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ರಾಧಿಕಾ ಚೆಂದದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ವೈಟ್ ಕಲರ್ ಲೆಹೆಂಗಾದಲ್ಲಿ ಅವರು ರಾಧಿಕಾ ಪಂಡಿತ್ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಪೋಸ್ ನೀಡಿದ್ದಾರೆ. ನೆಚ್ಚಿನ ನಟಿಯ ಚೆಂದದ ಲುಕ್ ನೋಡಿ ‘ರಾಜಕುಮಾರಿ’ ಎಂದು ರಾಧಿಕಾರನ್ನು ಫ್ಯಾನ್ಸ್ ಬಣ್ಣಿಸಿದ್ದಾರೆ. ಒಟ್ನಲ್ಲಿ ರಾಧಿಕಾ ನಯಾ ಲುಕ್ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ‘ವೆಂಕ್ಯಾ’ ಸಿನಿಮಾ
ಅಂದಹಾಗೆ, ಪತಿ ಯಶ್ (Yash) ಇಂದು ನ್ಯಾಷನಲ್ ಸ್ಟಾರ್ ಆಗಿ ಹೆಸರು ಮಾಡಿರೋದ್ದಕ್ಕೆ ನಟನ ಪರಿಶ್ರಮದ ಜೊತೆ ರಾಧಿಕಾ (Radhika) ಬೆಂಬಲ ಕೂಡ ಸಾಕಷ್ಟಿದೆ. ಯಶ್ ಪ್ರತಿ ಹೆಜ್ಜೆಯಲ್ಲೂ ರಾಧಿಕಾ ಜೊತೆಯಾಗಿ ಸಾಥ್ ನೀಡುತ್ತಲೇ ಬಂದಿದ್ದಾರೆ. ಯಶ್ ಕೂಡ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ನನ್ನ ಯಶಸ್ಸಿಗೆ ಪತ್ನಿಯೇ (Wife) ಶಕ್ತಿ ಎಂದು ರಾಧಿಕಾ ಅವರ ಬೆಂಬಲದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.
ಸ್ಟಾರ್ ನಟಿಯಾಗಿದ್ದಾಗಲೇ ಹಸೆಮಣೆ ಏರಿದ ನಟಿ ರಾಧಿಕಾ ಪಂಡಿತ್ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇಂದಿಗೂ ಮೊಗ್ಗಿನ ಮನಸ್ಸು, ಮಿಸ್ಟರ್ & ಮಿಸೆಸ್ ರಾಮಾಚಾರಿ, ದೊಡ್ಮನೆ ಹುಡುಗ, ಲವ್ ಗುರು ಸೇರಿದಂತೆ ಹಲವು ಸೂಪರ್ ಚಿತ್ರಗಳನ್ನು ನೀಡಿದ್ದಾರೆ.
ಮದುವೆ ಬಳಿಕವೂ ರಾಧಿಕಾ ಫಿಟ್ ಆಗಿದ್ದಾರೆ. ಯಾವ ಯುವ ನಟಿಯರಿಗೂ ಕಮ್ಮಿಯಿಲ್ಲದಂತೆ ಮಿಂಚುವ ರಾಧಿಕಾ, ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಮಾಡಬೇಕು ಅಭಿಮಾನಿಗಳ ಆಸೆ. ಅದಕ್ಕಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.
ಇನ್ನೂ ಹಲವು ವರ್ಷಗಳ ಪ್ರೀತಿಗೆ 2016ರಲ್ಲಿ ಯಶ್ ಮತ್ತು ರಾಧಿಕಾ ಮದುವೆಯ ಮುದ್ರೆ ಒತ್ತಿದರು. ಇವರ ದಾಂಪತ್ಯಕ್ಕೆ ಇಬ್ಬರೂ ಮಕ್ಕಳು ಸಾಕ್ಷಿಯಾಗಿದ್ದಾರೆ.