ಸ್ಯಾಂಡಲ್ವುಡ್ನ ಸಿಂಡ್ರೆಲಾ ರಾಧಿಕಾ ಪಂಡಿತ್(Radhika Pandit) ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಆಗಾಗ ತಮ್ಮ ಹೊಸ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಆಕ್ಟೀವ್ ಆಗಿದ್ದಾರೆ. ಇದೀಗ ನಟಿಯ ಕ್ಯೂಟ್ ಫೋಟೋ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಕನ್ನಡದ ಸಾಕಷ್ಟು ಚಿತ್ರಗಳ ಮೂಲಕ ಗಮನ ಸೆಳೆದಿರುವ ಧ್ರುವ ತಾರೆ ರಾಧಿಕಾ ಪಂಡಿತ್, ಸಿನಿಮಾದಿಂದ ಅಂತರ ಕಾಯ್ದುಕೊಂಡರು. ಅಭಿಮಾನಿಗಳ ಜತೆ ನಿರಂತರ ಸಂಪರ್ಕವಿಟ್ಟುಕೊಳ್ಳಲು ನಟಿ ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಇದೀಗ ತಮ್ಮ ಟ್ರಿಪ್ನ ಹೊಸ ಫೋಟೋ ಶೇರ್ ಮಾಡಿದ್ದಾರೆ. ಜತೆಗೆ ತೆರೆಹಿಂದಿನ ಕಹಾನಿಯನ್ನ ಕೂಡ ನಟಿ ಬರೆದುಕೊಂಡಿದ್ದಾರೆ.
`ಕೆಜಿಎಫ್ 2′ (Kgf 2) ಚಿತ್ರದ ಸೂಪರ್ ಸಕ್ಸಸ್ ನಂತರ ಯಶ್ (Yash) ಮತ್ತು ರಾಧಿಕಾ (Radhika Pandit) ಇತ್ತೀಚೆಗೆ ವಿದೇಶಕ್ಕೆ ತೆರಳಿದ್ದರು. ನದಿಯ ಮಧ್ಯೆ ಬೋಟ್ನಲ್ಲಿ ರಾಧಿಕಾ ಕುಳಿತಿರುವ ಫೋಟೋವನ್ನ ಯಶ್ ಕ್ಲಿಕಿಸಿದ್ದಾರೆ. ಈ ಫೋಟೋವನ್ನ ಶೇರ್ ಮಾಡಿ, ಯಾವಾಗಲೂ ಹೆಂಡತಿ ಪರ್ಫೆಕ್ಟ್ ಶಾಟ್ ಅನ್ನು ಹೇಗೆ ತೆಗೆಯಬೇಕು ಎಂದು ಸೂಚನೆ ಕೊಡುತ್ತಾಳೆ. ಅದು ಎಲ್ಲಿಯವರೆಗೆ ಎಂದರೆ ಒಬ್ಬರು ಬೇಸರಗೊಳ್ಳುವವರೆಗೆ ಎಂದು ಬರೆದುಕೊಂಡಿದ್ದಾರೆ. ಒಟ್ನಲ್ಲಿ ನಟಿಯ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ
View this post on Instagram
ಇನ್ನೂ `ಆದಿಲಕ್ಷ್ಮಿ ಪುರಾಣ’ ಚಿತ್ರದ ನಂತರ ರಾಧಿಕಾ ಪಂಡಿತ್ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ನಟಿಯ ಕಂಬ್ಯಾಕ್ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.