Deepavali: ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ- ರಾಧಿಕಾ ಪಂಡಿತ್

Public TV
1 Min Read
radhika pandit

ದೀಪಾವಳಿ ಹಬ್ಬದ (Deepavali Festival) ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ದೀಪ ಬೆಳಗುವ ಮೂಲಕ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ದೀಪಾವಳಿ ಹಬ್ಬದ ಆಚರಣೆ ಮಾಡಲಾಗುತ್ತಿದೆ. ಹೀಗಿರುವಾಗ ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ ಎಂದು ವಿಶೇಷವಾಗಿ ರಾಧಿಕಾ ಪಂಡಿತ್ (Radhika Pandit) ವಿಶ್ ಮಾಡಿದ್ದಾರೆ. ಇದನ್ನೂ ಓದಿ:ದೀಪಾವಳಿಗೆ ಬಂತು ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಪೋಸ್ಟರ್

radhikaರಾಧಿಕಾ ಯಶ್ (Radhika Yash) ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಕುಟುಂಬ ಮತ್ತು ಸ್ನೇಹಿತರ ಜೊತೆಗೂಡಿ ರಾಧಿಕಾ ಪಂಡಿತ್ ದೀಪಾವಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು, ನಿಮ್ಮ ಬಾಳಿನಲ್ಲಿ ಕತ್ತಲೇ ಕಳೆದು ಬೆಳಕು ಮೂಡಲಿ ಎಂದು ಪ್ರೀತಿಯಿಂದ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಶುಭಕೋರಿದ್ದಾರೆ.

radhika pandit 1

ಇನ್ನೂ ಚಂದವನದ ಸಿಂಡ್ರೆಲ್ಲಾ ರಾಧಿಕಾ, ಮತ್ತೆ ನಟನೆಗೆ ಮರಳಲಿ ಎಂದು ಕನ್ನಡಿಗರು ಎದುರು ನೋಡ್ತಿದ್ದಾರೆ. ಯಶ್ 19 (Yash 19) ಬಗ್ಗೆ ಅದೆಷ್ಟು ಫ್ಯಾನ್ಸ್‌ಗೆ ಕುತೂಹಲ ಇದ್ಯೋ, ಹಾಗೆಯೇ ರಾಧಿಕಾ ಮುಂದಿನ ಸಿನಿಮಾ (Films) ಬಗ್ಗೆ ಅಪ್‌ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ. ರಾಧಿಕಾ ದೀಪಾವಳಿ ವಿಶ್ಸ್‌ಗೆ ಫ್ಯಾನ್ಸ್, ಚಿತ್ರದ ಬಗ್ಗೆ ಮಾಹಿತಿ ನೀಡಿ ಎಂದೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ.

ಸೂಕ್ತ ಕಥೆ ಮತ್ತು ಒಳ್ಳೆಯ ಪಾತ್ರ ಇಷ್ಟವಾಗಿದ್ದಲ್ಲಿ ಖಂಡಿತಾ ನಟಿಸುತ್ತೇನೆ ಎಂದು ರಾಧಿಕಾ (Radhika Pandit) ಕೂಡ ತಿಳಿಸಿದ್ದರು.

Share This Article