ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಇದೀಗ ಸಹೋದರ ಗೌರಂಗ್‌ಗೆ ವಿಶೇಷವಾಗಿ ಶುಭಕೋರಿದ್ದಾರೆ. ಗೌರಂಗ್ (Gourang Pandit) ಜೊತೆಗಿನ ಫೋಟೋ ಹಂಚಿಕೊಂಡು, ಪ್ರೀತಿಯಿಂದ ರಾಧಿಕಾ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ 2ನೇ ಮದುವೆಯಾದ ‘ಜೊತೆ ಜೊತೆಯಲಿ’ ನಟಿ ಮಾನಸ
ನಿನ್ನಂತ ಸಹೋದರನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಗೌರಂಗ್. ಹುಟ್ಟುಹಬ್ಬದ ಶುಭಾಶಯಗಳು ಗೊಲ್ಲು, ಲವ್ ಯೂ ಎಂದು ನಟಿ ಶುಭಹಾರೈಸಿದ್ದಾರೆ. ನಟಿಯ ಸಹೋದರನಿಗೆ ಅಭಿಮಾನಿಗಳು ಕೂಡ ಶುಭಕೋರಿದ್ದಾರೆ. ಇನ್ನೂ ಗೌರಂಗ್ ಪತ್ನಿ ಮತ್ತು ಮಕ್ಕಳೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ.
View this post on Instagram
ಅಂದಹಾಗೆ, 2019ರಲ್ಲಿ ‘ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ ಕಡೆಯದಾಗಿ ರಾಧಿಕಾ ಪಂಡಿತ್ ನಟಿಸಿದರು. ಯಶ್ ಜೊತೆ ಆ್ಯಡ್ ಶೂಟ್‌ಗಳಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ಆದರೆ ಅವರು ಮತ್ತೆ ಸಿನಿಮಾ ಮಾಡಲಿ ಎಂಬುದು ಅಭಿಮಾನಿಗಳ ಆಶಯ. ರಾಧಿಕಾ ಕೂಡ ಉತ್ತಮ ಕಥೆ ಸಿಕ್ಕರೆ, ಖಂಡಿತಾ ನಟಿಸುತ್ತೇನೆ ಎಂದು ಹೇಳಿದ್ದರು.
ಇನ್ನೂ ಇತ್ತೀಚೆಗೆ ಅವರು ಹೊಸ ಫೋಟೋಶೂಟ್‌ಗಳ ಮೂಲಕ ಗಮನ ಸೆಳೆದಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ಗೆ ನಟಿ ಮತ್ತೆ ಕಮ್ ಬ್ಯಾಕ್ ಆಗುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ ಫ್ಯಾನ್ಸ್. ಎಲ್ಲದ್ದಕ್ಕೂ ನಟಿಯ ಕಡೆಯಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.