Connect with us

Bengaluru City

ಯಶ್ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಮೂಲಕ ರಾಧಿಕಾ, ಶಾನ್ವಿ ಸಂದೇಶ

Published

on

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ 50 ದಿನಗಳಿರುವ ಹಿನ್ನೆಲೆಯಲ್ಲಿ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕಾಮನ್ ಡಿಪಿ ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಅವರು ತಮ್ಮ ಇನ್‍ಸ್ಟಾದಲ್ಲಿ ಯಶ್ ಮುಖವಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ರಾಕಿಂಗ್ ಸ್ಟಾರ್ ಯಶ್ ಬಾಸ್, ಪರಿಹಾರದ ಒಂದು ಭಾಗವಾಗಿರಿ. ನೀರು ಉಳಿಸಿ, ಗಿಡಗಳನ್ನು ಬೆಳೆಸಿ ಎಂದು ಬರೆಯಲಾಗಿದೆ.

ಈ ಫೋಟೋ ಹಂಚಿಕೊಂಡ ರಾಧಿಕಾ ಅದಕ್ಕೆ, “ಹುಟ್ಟುಹಬ್ಬ ಕೇವಲ ಆಚರಣೆಗಳ ಬಗ್ಗೆ ಅಲ್ಲ. ನಿರ್ಣಯಗಳನ್ನು ಮಾಡುವ ಸಂದರ್ಭ. ಜನವರಿ 8ಕ್ಕೆ 50 ದಿನಗಳ ಕ್ಷಣಗಣನೆ ಶುರುವಾಗಿದೆ. ಕರ್ನಾಟಕ ಅಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳು ಯಶ್‍ಗೆ ತೋರುವ ಪ್ರೀತಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಪ್ರಯತ್ನದ ಹಿಂದಿನ ಅಲೋಚನೆಗಳು ನಿಜವಾಗಿಯೂ ಯೋಗ್ಯವಾಗಿದೆ. ಇದನ್ನು ಬೆಂಬಲಿಸಲು ನಟಿ ಶಾನ್ವಿ ಶ್ರೀವಾತ್ಸವ್ ಇಂದು ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದಾರೆ. ಶಾನ್ವಿ ಅವರ ಈ ಕೆಲಸಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ನೀರು ಉಳಿಸಿ, ಗಿಡ ಬೆಳೆಸಿ, ಗೋ ಗ್ರೀನ್” ಎಂದು ಬರೆದುಕೊಂಡಿದ್ದಾರೆ.

ನಟಿ ಶಾನ್ವಿ ಕೂಡ ತಮ್ಮ ಇನ್‍ಸ್ಟಾದಲ್ಲಿ ಯಶ್ ಅವರ ಕಾಮನ್ ಡಿಪಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, ನಮಸ್ಕಾರ. ರಾಕಿಂಗ್ ಸ್ಟಾರ್ ಯಶ್ ಸರ್ ಅಭಿಮಾನಿಗಳಿಗೆಲ್ಲಾ. ಯಶ್ ಸರ್ ಅವರ ಯೋಚನೆ-ಯೋಜನೆ ಅವರ ಮಾರ್ಗ ನಮಗೆಲ್ಲಾ ಸ್ಫೂರ್ತಿದಾಯಕ. ಅವರ ಹಾದಿಯಲ್ಲಿ ನಡೆಯುತ್ತಿರುವ ಅವರ ಫ್ಯಾನ್ಸ್ ಆದ ನೀವು, ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ರೀತಿ ಹೆಮ್ಮೆ ಎನಿಸುತ್ತಿದೆ.

ಯಶ್ ಅವರ ಹುಟ್ಟುಹಬ್ಬಗೂ 50 ದಿನ ಮೊದಲು ಎಂದರೆ, 50ನೇ ದಿನವಾದ ಇಂದಿನಿಂದ ಜನವರಿ 8ರವರೆಗೂ ನೀವು ಮಾಡುತ್ತಿರುವ ಈ ಪರಿಹಾರದ ಒಂದು ಭಾಗವಾಗಿರಿ. ನೀರು ಉಳಿಸಿ, ಗಿಡಗಳನ್ನು ಬೆಳೆಸಿ ಅಮೂಲ್ಯವಾದಂತಹ ಅಭಿಯಾನದಲ್ಲಿ ನನ್ನನೂ ಭಾಗಿಯನ್ನಾಗಿಸಿದ್ದಕ್ಕೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗಕ್ಕೆ ಧನ್ಯವಾದ ಹೇಳುತ್ತಾ, ಈ ಪೋಸ್ಟರ್ ಪೋಸ್ಟ್ ಮಾಡಿದ್ದೀನಿ.

 

View this post on Instagram

 

ನಮಸ್ಕಾರ… ರಾಕಿಂಗ್ ಸ್ಟಾರ್ ಯಶ್ ಸಾರ್ ಅಭಿಮಾನಿಗಳಿಗೆಲ್ಲಾ… ಯಶ್ ಸಾರ್ ಅವ್ರ ಯೋಚನೆ-ಯೋಜನೆ ಅವ್ರ ಮಾರ್ಗ ನಮಗೆಲ್ಲಾ ಸ್ಫೂರ್ತಿದಾಯಕ. ಅವ್ರ ಹಾದಿಯಲ್ಲಿ ನಡೀತಿರೋ ಅವ್ರ ಫ್ಯಾನ್ಸ್ ಆದ ನೀವು, ಅವರ ಹುಟ್ಟುಹಬ್ಬವನ್ನ ಆಚರಿಸ್ತಿರೋ ರೀತಿ ಹೆಮ್ಮೆ ಅನ್ನಿಸ್ತಿದೆ. ಯಶ್ ರವರ ಬರ್ತ್ಡೇಗೂ 50ದಿನ ಮೊದಲು ಅಂದ್ರೆ,50ನೇ ದಿನವಾದ ಇಂದಿನಿಂದ ಜನವರಿ 8ರವರೆಗೂ ನೀವು ಮಾಡ್ತಿರೋ ಈ BE A PART OF SOLUTION BUT NOT POLLUTION. SAVE WATER,PLANT TREES,GO GREEN ಅಮೂಲ್ಯವಾದಂತಹ ಅಭಿಯಾನದಲ್ಲಿ ನನ್ನನೂ ಭಾಗಿಯನ್ನಾಗಿಸಿದ್ದಕ್ಕೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗಕ್ಕೆ ಧನ್ಯವಾದ ಹೇಳ್ತಾ.. ಈ 5BOSS0 POSTERನ ಪೋಸ್ಟ್ ಮಾಡ್ತಿದ್ದೀನಿ. ಅಂದ್ಹಾಗೆ ಈ ಪೋಸ್ಟರ್ ಕಾನ್ಸೆಪ್ಪ್ ನನಗ್ ಸಖತ್ ಇಷ್ಟ ಆಯ್ತು. ಪರಿಸರ ಮಾಲಿನ್ಯದ ಮೇಲೆ ಕೋಪಗೊಂಡಿರೋ ಯಶ್ ಸಾರ್ ಅವರ ಮೈಮನಸು ಹಸಿರುಮಯವಾಗಿರುವಂತೆ ಡಿಸೈನ್ ಮಾಡಿರೋ ರೀತಿ ಇಂಟ್ರೆಸ್ಟಿಂಗ್ ಅನ್ನಿಸ್ತಿದೆ. ಯಶ್ ಅವರ ಅಭಿಮಾನಿಗಳ ಈ ಅಭಿಯಾನದಲ್ಲಿ ನಾನು ಭಾಗಿಯಾಗಿದ್ದೀನಿ ನೀವು ಭಾಗಿಯಾಗಿ.. ಹಸಿರು ಬೆಳೆಸೋಣ.. ಪರಿಸರ ಉಳಿಸೋಣ.. ಜೈ ಹಿಂದ್, ಜೈ ಕರ್ನಾಟಕ ಮಾತೆ ನಿಮ್ಮ ಶಾನ್ವಿ ಶ್ರೀವಾತ್ಸವ್ #savegreen #Savewater #goGreenyashfans #worldwideyashfans #rockingstaryashfans @thenameisyash h @iamradhikapandit

A post shared by Shanvi Srivastava (@shanvisri) on

ಅಂದಹಾಗೆ ಈ ಪೋಸ್ಟರ್ ಕಾನ್ಸೆಪ್ಪ್ ನನಗ್ ಸಖತ್ ಇಷ್ಟ ಆಯಿತು. ಪರಿಸರ ಮಾಲಿನ್ಯದ ಮೇಲೆ ಕೋಪಗೊಂಡಿರುವ ಯಶ್ ಸರ್ ಅವರ ಮೈ ಮನಸ್ಸು ಹಸಿರುಮಯವಾಗಿರುವಂತೆ ಡಿಸೈನ್ ಮಾಡಿರುವ ರೀತಿ ಇಂಟ್ರೆಸ್ಟಿಂಗ್ ಎನಿಸುತ್ತಿದೆ. ಯಶ್ ಅವರ ಅಭಿಮಾನಿಗಳ ಈ ಅಭಿಯಾನದಲ್ಲಿ ನಾನು ಭಾಗಿಯಾಗಿದ್ದೀನಿ, ನೀವೂ ಭಾಗಿಯಾಗಿ. ಹಸಿರು ಬೆಳೆಸೋಣ, ಪರಿಸರ ಉಳಿಸೋಣ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *