ಬೆಂಗಳೂರು: ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಬದುಕಿನ ಗುಟ್ಟನ್ನು ಬಿಟ್ಟು ಕೊಟ್ಟಿದ್ದಾರೆ. ನಾನು ಕೊನೆಯವರೆಗೂ ರಾಧಿಕಾ ಕುಮಾರಸ್ವಾಮಿ ಆಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ.
ನನಗೆ ಮೂರು ಮಕ್ಕಳಿಲ್ಲ, ಇರುವುದೊಂದೇ ಮಗು. ಬದುಕು ಬದಲಾಗಿದೆ ಅಷ್ಟೇ ನನ್ನ ಹೆಸರು ವೃತ್ತಿಯಲ್ಲಿ ಯಾವುದೇ ಬದಲಾಗಿಲ್ಲ. ನಾನು ನನಗೆ ಇಷ್ಟಬಂದ ಹಾಗೆ ಇರುತ್ತೇನೆ. ಚಿತ್ರರಂಗದಿಂದ ದೂರ ಸರಿಯುವುದಿಲ್ಲ. ಮುಂದಿನ ದಿನಗಳಲ್ಲಿ ರಾಜಕೀಯ ರಂಗ ಸೇರುವ ಇಚ್ಚೆಯನ್ನು ಹೊಂದಿದ್ದೇನೆ. ಆದ್ರೆ ಯಾವ ಪಕ್ಷ ಎಂಬುದರ ರಾಧಿಕಾ ಅವರು ರಹಸ್ಯ ಬಿಟ್ಟುಕೊಟ್ಟಿಲ್ಲ.
Advertisement
ನನ್ನ ಬಗ್ಗೆ ನೂರಾರು ರೀತಿಯ ಗಾಸಿಪ್ಗಳು ಬರುತ್ತವೆ. ಅವುಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನನಗೆ ಇವಾಗ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎಂಬ ಉದ್ದೇಶವಿದೆ. ಈ ವರ್ಷ ನನ್ನ ಬ್ಯಾನರ್ನಿಂದ ಒಂದು ಸಿನಿಮಾ ಬರಲಿದೆ. ನನಗೆ ಶರಪಂಜರ ರೀತಿಯ ಸಿನಿಮಾದಲ್ಲಿ ನಟಿಸಬೇಕು ಎಂಬುದು ನನ್ನ ಆಸೆ ಎಂದು ಹೇಳಿದ್ರು.
Advertisement
ನಾನು ಎಲ್ಲಿಯೂ ಹೋಗಿರಲಿಲ್ಲ. ಬೆಂಗಳೂರನಲ್ಲಿ ವಾಸವಾಗಿದ್ದೇನೆ. ಮಂಗಳೂರು, ಲಂಡನ್ನಲ್ಲಿ ವಾಸವಿದ್ದೇನೆ ಎಂದು ಹೇಳಲಾಗುತ್ತಿದೆ. ನಾನು ಹುಟ್ಟಿದ್ದು ಮಂಗಳೂರಲ್ಲಿ ಹುಟ್ಟಿ, ಬೆಳೆದಿದು ಅಲ್ಲಿ. ಅಲ್ಲಿ ನಮ್ಮ ತೋಟದ ಮನೆಯಿದೆ. ವರ್ಷಕ್ಕೆ ಒಂದು ಸಾರಿ ಮಾತ್ರ ಹೋಗ್ತಿನಿ. ನನಗೆ ಸಿನಿಮಾಗಳೆಂದ್ರೆ ತುಂಬಾ ಬಲು ಇಷ್ಟ ಎಂದು ರಾಧಿಕಾ ಕುಮಾರಸ್ವಾಮಿ ಮನದಾಳದ ಮಾತನ್ನು ಹಂಚಿಕೊಂಡ್ರು.