ಸಮುದ್ರ ತೀರದಲ್ಲಿ ಹೋಳಿ ಆಡಿದ ನಟಿ ರಾಧಿಕಾ ಕುಮಾರಸ್ವಾಮಿ

Public TV
1 Min Read
Radhika Kumaraswamy 2

ನಿನ್ನೆಯಷ್ಟೇ ಹೋಳಿ ಹಬ್ಬ ಮುಗಿದಿದೆ. ಸಾಮಾನ್ಯರಂತೆ ಸೆಲೆಬ್ರಿಟಿಗಳು  ಕೂಡ ತಮ್ಮಿಷ್ಟದ ಜಾಗದಲ್ಲಿ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಬಹುತೇಕ ಸೆಲೆಬ್ರಿಟಿಗಳು ಮನೆಯಲ್ಲಿ ಅಥವಾ ರೆಸಾರ್ಟ್ ನಲ್ಲಿ ಬಣ್ಣದೋಕುಳಿ ಆಡಿದ್ದರೆ, ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಮಾತ್ರ ಸಮುದ್ರ ತೀರದಲ್ಲಿ ಹೋಳಿ ಆಡಿ, ಆ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅನೇಕರು ಆ ವಿಡಿಯೋಗೆ ಮೆಚ್ಚಿಕೊಂಡಿದ್ದಾರೆ.

Radhika Kumaraswamy 1

ರಾಧಿಕಾ ಕುಮಾರಸ್ವಾಮಿ ಮಾತ್ರವಲ್ಲ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ತಮ್ಮ ಕೆಲಸದ ನಡುವೆಯೇ ಹೋಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ಬಾರಿ ನಮ್ಮೆಲ್ಲರಿಗೂ ಕೆಲಸದ ನಡುವೆಯೇ ಹೋಳಿ. ಆದರೆ ನೀವೆಲ್ಲರೂ ಸುರಕ್ಷಿತವಾಗಿ ಹೋಳಿ ಆಡುತ್ತಾ ಎಂಜಾಯ್ ಮಾಡುತ್ತಿದ್ದೀರಿ ಎಂದು ನಾನು ಭಾವಿಸಿದ್ದೇನೆ. ಇಲ್ಲಿಂದ ನಾವು ನಿಮಗೆ ಹೋಳಿ ಹಬ್ಬದ ಶುಭಾಶಯ ತಿಳಿಸುತ್ತೇವೆ ಎಂದು ತಮ್ಮ ತಂಡದ ಜೊತೆ ಇರುವ ಫೋಟೋವನ್ನ ರಶ್ಮಿಕಾ ಮಂದಣ್ಣ ಅವರು ಶೇರ್ ಮಾಡಿಕೊಂಡಿದ್ದಾರೆ.

AISHWARYA RAI 1

‘ಗೂಗ್ಲಿ’ ನಟಿ ಕೃತಿ ಕರಬಂಧ (Kriti Kharabanda) ಅವರು ಮದುವೆಯ ಬಳಿಕ ಪತಿ ಪುಲ್ಕಿತ್ ಸಾಮ್ರಾಟ್ ಜೊತೆ ರೊಮ್ಯಾಂಟಿಕ್ ಆಗಿ ಹೋಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ- ಪ್ರಿಯಾಂಕಾ (Priyanka Upendra) ದಂಪತಿ ಮನೆಯಲ್ಲಿ ಅದ್ಧೂರಿಯಾಗಿ ಹೋಳಿ ಸೆಲೆಬ್ರೇಶನ್ ಮಾಡಿದ್ದಾರೆ. ಉಪ್ಪಿ ಮನೆಯಲ್ಲಿ ತಾರೆಯರ ದಂಡೇ ಸೇರಿದೆ. ನಿರಂಜನ್, ಶರಣ್ಯಾ ಶೆಟ್ಟಿ, ಗುರುಕಿರಣ್ ದಂಪತಿ, ಪೂಜಾ ಲೋಕೇಶ್, ಗ್ರೀಷ್ಮಾ ಸೃಜನ್ ಲೋಕೇಶ್, ಶಿಲ್ಪಾ ಗಣೇಶ್ ಸೇರಿದಂತೆ ಅನೇಕರು ಭಾಗಿಯಾಗಿ ಸಂಭ್ರಮಿಸಿದ್ದಾರೆ.

 

ಚಂದನವನದ ನಟಿ ಸುಧಾರಾಣಿ (Sudharani) ಹೋಳಿ ಹಬ್ಬವನ್ನು ಡ್ಯಾನ್ಸ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ. ಕಲರ್ ಕಲರ್ ‌ ಎಂಬ ಹಾಡಿಗೆ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ನಟಿಯ ಡ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಬಾಲಿವುಡ್‌ನ ಲವ್ ಬರ್ಡ್ಸ್ ಕಿಯಾರಾ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಜೋಡಿ ಕೂಡ ಹೋಳಿ ಹಬ್ಬವನ್ನು ಕಲರ್‌ಫುಲ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

Share This Article