– ಮುಂದೆ ಶಿವಣ್ಣ ಜೊತೆ ಅಭಿನಯಿಸುತ್ತೇನೆ ಅಂದ್ರು ನಟಿ
ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಇತ್ತೀಚೆಗೆ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಜ್ಯುವೆಲ್ಸ್ ಆಫ್ ಇಂಡಿಯಾ ರಾಯಭಾರಿಯಾಗಿರುವ ರಾಧಿಕಾ ನೂತನ ವಿನ್ಯಾಸದ ಆಭರಣ ಧರಿಸಿ ಮಿಂಚಿದ್ದಾರೆ.
ಗಣೇಶ ಹಬ್ಬದ ಪ್ರಯುಕ್ತ ಲಾಂಚ್ ಆಗಿರುವ ಈ ಹೊಸ ಬಗೆಯ ಆಭರಣಗಳನ್ನ ಪರಿಚಯಿಸಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ರಾಧಿಕಾ ಮನೆಯಲ್ಲಿ ಆಭರಣಗಳ ಎಕ್ಸಿಬೀಷನ್ ಏರ್ಪಡಿಸಲಾಗಿತ್ತು. ಆದ್ದರಿಂದ ಆಭರಣ ಪ್ರಿಯೆ ರಾಧಿಕಾ ಆ್ಯಂಟಿಕ್ ಜ್ಯುವೆಲ್ಲರಿ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
Advertisement
Advertisement
ಬ್ಯೂಟಿ ಸೆಕ್ರೇಟ್
ನಾನು ಯಾವಾಗಲೂ ಪಾಸಿಟೀವ್ ಆಗಿ ಇರುತ್ತೇನೆ. ನಾನು ಯಾವುದೇ ವಿಚಾರಕ್ಕೂ ಟೆನ್ಷನ್ ಮಾಡಿಕೊಳ್ಳುವುದಿಲ್ಲ. ಒತ್ತಡ ಅನ್ನೋದು ಎಲ್ಲರ ಜೀವನದಲ್ಲೂ ಇರುತ್ತದೆ. ಆದರೆ ನಾನು ಅದನ್ನು 5-10 ಮಿನಿಟ್ ತೆಗೆದುಕೊಳ್ಳುತ್ತೇನೆ. ನಂತರ ಅದನ್ನು ಮರೆತು ನನ್ನ ಕೆಲಸದ ಕಡೆ ಗಮನ ಕೊಡುತ್ತೇನೆ. ಯಾವಾಗಲೂ ಸಿನಿಮಾ, ಕುಟುಂಬ ಎಂದು ಬ್ಯುಸಿಯಾಗಿರುತ್ತೇನೆ. ಕುಟುಂಬದೊಂದಿಗೆ ಸಂತೋಷದಿಂದ ಇರುತ್ತೇನೆ ಎಂದು ರಾಧಿಕಾ ಕುಮಾರಸ್ವಾಮಿ ಅವರು ಹೇಳಿದ್ದಾರೆ.
Advertisement
ಸಿನಿಮಾ ಜೀವನ
ರಾಧಿಕಾ ಬ್ಯಾನರ್ ಅಡಿಯಲ್ಲಿ `ಭೈರಾದೇವಿ’ ಸಿನಿಮಾ ಮೂರು ಭಾಷೆಯಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸದ್ಯಕ್ಕೆ ಶೂಟಿಂಗ್ ನಡೆಯುತ್ತಿದ್ದು, ಮೂರು ಭಾಷೆಯಾಗಿರುವುದರಿಂದ ಸ್ವಲ್ಪ ತಡವಾಗುತ್ತಿದೆ. ಈ ತಿಂಗಳು ಸಂಪೂರ್ಣ ಶೂಟಿಂಗ್ ಮುಗಿಸುತ್ತೇವೆ. ಡಿಸೆಂಬರ್ ಅಥವಾ ಜನವರಿಯಲ್ಲಿ ರಿಲೀಸ್ ಮಾಡುವುದಕ್ಕೆ ಪ್ಲಾನ್ ಮಾಡುತ್ತಿದ್ದೇವೆ. ರಾಜೇಂದ್ರ ಪೊನ್ನಪ್ಪ ಅವರ ಕಾಂಟ್ರ್ಯಾಕ್ಟ್ ಇನ್ನು ಏಳು ದಿನಗಳಿದೆ. ನಂತರ ನನ್ನ ಪೋರ್ಷನ್ ಸಂಪೂರ್ಣವಾಗುತ್ತದೆ. `ದಮಯಂತಿ’ ಸಿನಿಮಾದಲ್ಲಿ ನಾನು ರಾಣಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದೇ ರೀತಿ ರೇಷ್ಮೆ ಸ್ಯಾರಿ, ಜ್ಯುವೆಲ್ಲರಿ ಹಾಕಿಕೊಂಡಿದ್ದೇನೆ. ತುಂಬಾ ಸಿನಿಮಾಗಳನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
Advertisement
ಶಿವಣ್ಣನ ಬಗ್ಗೆ ಮಾತು
ನಾನು ಮತ್ತು ಶಿವಣ್ಣ ಒಂದು ಸಿನಿಮಾ ಮಾಡಬೇಕಿತ್ತು. ಆದರೆ ಇಬ್ಬರೂ ಶೂಟಿಂಗ್ ಬ್ಯುಸಿಯಾಗಿದ್ದು, ಅದು ಸಾಧ್ಯವಾಗಿಲ್ಲ. ಆದರೆ ಮುಂದೇ ಇಬ್ಬರು ಒಟ್ಟಾಗಿ ಅಭಿನಯಿಸುತ್ತೇವೆ. ಅವರ ಜೊತೆ ಸಿನಿಮಾ ಮಾಡುವುದು ಅಂದರೆ ನನಗೆ ತುಂಬಾ ಇಷ್ಟ. ಶಿವಣ್ಣ ಯಾವಾಗಲೂ ಸರಳತೆಯಿಂದ ಇರುತ್ತಾರೆ. ಆದ್ದರಿಂದ `ತವರಿಗೆ ಬಾ ತಂಗಿ’ ಸಿನಿಮಾ ಮಾಡಿ ನಾನು ರಾಖಿ ಕಟ್ಟಿದ್ದೇನೆ. ಇದುವರೆಗೂ ನಾವು ಅಣ್ಣ-ತಂಗಿಯಾಗಿ ಸಂತೋಷದಿಂದ ಇದ್ದೇವೆ ಎಂದು ಹೇಳಿದ್ದಾರೆ.
ಶಮಿಕಾಗೆ ನಟಿಯಾಗಬೇಕು ಎಂದು ಇಷ್ಟ ಇದೆ. ಸದ್ಯಕ್ಕೆ ನಾನು ಸಿನಿಮಾ ಬಿಟ್ಟಿಲ್ಲ. ನನಗೆ ತುಂಬಾ ಕನಸುಗಳಿವೆ. ಅದರಲ್ಲಿ ನನ್ನ ಬ್ಯಾನರ್ ಅಡಿಯಲ್ಲಿ ನಾನು ಹೀರೋಯಿನ್ ಆಗಿ ಮಾಡದಿದ್ದರು ನಿರ್ಮಾಪಕಿಯಾಗಿ ಕೆಲಸ ಮಾಡಬೇಕೆಂಬ ಆಸೆ ಇದೆ. ನನಗೆ ಎಲ್ಲ ತರಹದ ಪಾತ್ರ ಮಾಡಬೇಕು ಎಂದು ಇಷ್ಟ. ಆದರೆ ಹೆಚ್ಚಾಗಿ ಡ್ಯಾನ್ಸ್ ಇರುವ ಪಾತ್ರ ಮಾಡಬೇಕೆಂಬ ಆಸೆ ಇದೆ. ಕುಟುಂಬದೊಂದಿಗೆ ನಾನು ಸಂತೋಷದಿಂದ ಇದ್ದೇನೆ ಎಂದು ತನ್ನ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=_lFgTZCe8Ec