ಬೆಂಗಳೂರು: ಪ್ರತಿಯೊಬ್ಬ ಸ್ಟಾರ್ ನಟರಂತೆ ಕಾಣುವ ಒಬ್ಬೊಬ್ಬ ಜೂನಿಯರ್ ನಟ ಇರುತ್ತಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಹಾವ-ಭಾವ ನೋಡಿ ಅವರಂತಯೇ ಮಾತನಾಡುವುದು, ಲುಕ್ ಹಾಗೂ ವಾಕಿಂಗ್ ಸ್ಟೈಲ್ ಅನ್ನು ಅನುಸರಿಸುತ್ತಾರೆ. ಈಗ ಅದೇ ರೀತಿ ಜೂನಿಯರ್ ದರ್ಶನ್ ನೋಡಿ ನಟಿ ರಚಿತಾ ರಾಮ್ ಶಾಕ್ ಆಗಿದ್ದರು.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಒಂದು ಕಾಮಿಡಿ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರಂತೆಯೇ ಕಾಣುವ ಜೂನಿಯರ್ ದರ್ಶನ್ ಬಂದಿದ್ದರು. ಅಲ್ಲಿ ಅವರನ್ನು ನೋಡಿ ರಚಿತಾ ರಾಮ್ ಶಾಕ್ ಆಗಿದ್ದರು. ಅವಿನಾಶ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ವೃತ್ತಿಯಲ್ಲಿ ಆಟೋ ಡ್ರೈವರ್ ಕೆಲಸ ಮಾಡುತ್ತಿದ್ದಾರೆ. ಇವರು ನೋಡಲು ದರ್ಶನ್ ಥರನೇ ಕಾಣುತ್ತಾರೆ.
ಅವಿನಾಶ್ ನಟ ದರ್ಶನ್ ಅಭಿಮಾನಿಯಾಗಿದ್ದು, ಅವರ ಮಾತು, ವಾಕಿಂಗ್ ಸ್ಟೈಲ್ ಮತ್ತು ಲುಕ್ ಇತ್ಯಾದಿ ಎಲ್ಲವನ್ನು ಅನುಸರಿಸಿ ಅವರಂತೆಯೇ ಇರುತ್ತಾರೆ. ಆದ್ದರಿಂದ ಜೂನಿಯರ್ ದರ್ಶನ್ ಥರ ಕಾಣುತ್ತಾರೆ. ಅವಿನಾಶ್ ಕಾರ್ಯಕ್ರಮಕ್ಕೆ ದರ್ಶನ್ ರೀತಿ ನಡೆದುಕೊಂಡು ಬಂದು ಅವರ ಸಿನಿಮಾದ ಡೈಲಾಗ್ ಹೇಳುತ್ತಾರೆ. ಇದನ್ನು ನೋಡಿದ ರಚಿತಾ ರಾಮ್ ಒಂದು ಕ್ಷಣ ಆಶ್ಚರ್ಯ ಪಟ್ಟಿದ್ದರು.
ನಟಿ ರಚಿತಾ ಅವರು, ಮಾತನಾಡಿ ಎಂದು ಅವಿನಾಶ್ ಬಳಿ ಕೇಳಿಕೊಂಡಿದ್ದು, ಬಳಿಕ ಅವಿನಾಶ್ ಅವರ ದನಿಯಲ್ಲಿ ಮಾತನಾಡಿದರು. ಆನಂತರ ರಚಿತ್ ರಾಮ್ ಫುಲ್ ಖುಷಿಯಾಗಿದ್ದರು. ನಟಿ ರಚಿತಾ ರಾಮ್ ಜೊತೆ ಅವಿಶಾನ್ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಆಗ ರಚಿತಾ ಅವರು, ನಿಮ್ಮ ದರ್ಶನ್ ಸ್ಟೈಲ್ ಚೇಂಜ್ ಮಾಡಿಕೊಳ್ಳಿ, ನಿಮ್ಮತರ ಇರಿ ಎಂದು ಖುಷಿಯಿಂದ ಹೇಳಿದ್ದಾರೆ.
ಅವಿನಾಶ್ ನೋಡಿ ತುಂಬಾ ಖುಷಿಯಾಯಿತು. ದರ್ಶನ್ ಥರನೇ ಕಾಣುತ್ತಾರೆ. ನೀವು ಜೀವನದಲ್ಲಿ ದರ್ಶನ್ ಅವರ ರೀತಿ ಸಾಧನೆ ಮಾಡಿ ಎಂದು ವಿಶ್ ಮಾಡಿದ್ದಾರೆ. ಅವಿನಾಶ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಬಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv