ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ (Rachita Ram) ಅವರು ದರ್ಶನ್ (Darshan) ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸರ್‌ಗೆ ಬೇಲ್ ಸಿಕ್ಕಿರೋದು ಖುಷಿಯಿದೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಯಶ್- ‘ಟಾಕ್ಸಿಕ್’ ಬರ್ತ್‌ಡೇ ಪೀಕ್ ಗ್ಲಿಂಪ್ಸ್ ಔಟ್
ನಾನು ದರ್ಶನ್ ಸರ್ ಬಗ್ಗೆ ಹೇಳುತ್ತಲೇ ಇರುತ್ತೇನೆ. ಇಂಡಸ್ಟ್ರಿಯಲ್ಲಿ ಇರೋವರೆಗೂ ಇಂಡಸ್ಟ್ರಿ ಬಿಟ್ಟ ಮೇಲೆಯೂ ಅವರ ಬಗ್ಗೆ ಹೇಳಬೇಕಾಗುತ್ತದೆ. ಯಾಕೆಂದರೆ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ವ್ಯಕ್ತಿ. ತೂಗುದೀಪ ಬ್ಯಾನರ್ ನನ್ನ ಪರಿಚಯಿಸಿರೋದು. ಬುಲ್ ಬುಲ್ ತಂಡ ನನ್ನ ಪರಿಚಯಿಸಿದ್ದು, ಹಾಗಾಗಿ ನಾನು ಮತ್ತು ನನ್ನ ಕುಟುಂಬ ಅವರಿಗೆ ಆಭಾರಿಯಾಗಿರುತ್ತೇವೆ ಎಂದು ರಚಿತಾ ರಾಮ್ ಮಾತನಾಡಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ (Renukaswamy Murder Case) ದರ್ಶನ್ ಸರ್‌ಗೆ ರೆಗ್ಯೂಲರ್ ಬೇಲ್ ಆಗಿರೋದು ಖುಷಿಯಿದೆ. ಅವರಿಗೆ ಸ್ವಲ್ಪ ಸಮಯ ಕೊಡೋಣ. ಇದರ ಬಗ್ಗೆ ಅವರು ಮಾತನಾಡಿದರೆ ಸರಿಯಾಗಿರುತ್ತದೆ. ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಆದಷ್ಟು ಕಮ್ ಬ್ಯಾಕ್ ಮಾಡಲಿ, ಈ ಬಗ್ಗೆ ಅವರೇ ಮಾತನಾಡಿದರೆ ಚೆಂದ ಎಂದು ಹೇಳಿದ್ದಾರೆ.
ಅಂದಹಾಗೆ, 2013ರಲ್ಲಿ ದರ್ಶನ್ ನಟನೆಯ ‘ಬುಲ್ ಬುಲ್’ ಸಿನಿಮಾ ಮೂಲಕ ರಚಿತಾ ರಾಮ್ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಣ್ಣದ ಬದುಕಿಗೆ ಬಂದು 11 ವರ್ಷ ಕಳೆದರೂ ನಟಿಯ ಮೇಲೆ ಫ್ಯಾನ್ಸ್ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ.