ಬೆಂಗಳೂರು: ಆರಂಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಿದ್ದವರು ರಚಿತಾ ರಾಮ್. ಸ್ಟಾರ್ ನಟರ ಜೊತೆ ನಟಿಸಿದರೂ ಕೂಡಾ ಪಕ್ಕಾ ಹಾಟ್ ಪಾತ್ರಗಳಲ್ಲಿ ಅವರು ಈವರೆಗೂ ಕಾಣಿಸಿರಲಿಲ್ಲ. ಆದರೆ ರಚಿತಾರನ್ನು ಅಂಥಾದ್ದೊಂದು ಲುಕ್ಕಿನಲ್ಲಿ ಅನಾವರಣಗೊಳಿಸಲು ನಿರ್ದೇಶಕ ಆರ್.ಚಂದ್ರು ಮುಂದಾಗಿದ್ದಾರಾ ಅಂತೊಂದು ಅನುಮಾನ ಎಲ್ಲರಲ್ಲಿಯೂ ಇದೆ!
ಇದಕ್ಕೆ ಕಾರಣವಾಗಿರೋದು ಉಪ್ಪಿ ನಾಯಕರಾಗಿ ನಟಿಸುತ್ತಿರೋ ಐ ಲವ್ ಯೂ ಚಿತ್ರ. ಆರ್ ಚಂದ್ರು ನಿರ್ದೇಶನದ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಇದರಲ್ಲಿ ಉಪೇಂದ್ರ ಅವರೇ ಸಿಂಗಲ್ ಪೀಸ್‍ನಲ್ಲಿ ಕಂಗೊಳಿಸಿದ್ದಾರೆ. ನಾಯಕ ನಟ ಉಪ್ಪಿಯೇ ಈ ಪಾಟಿ ಹಾಟ್ ಆಗಿ ಕಾಣಿಸಿಕೊಂಡಿರೋವಾಗ ನಾಯಕಿ ರಚಿತಾ ರಾಮ್ ಇನ್ನೆಷ್ಟು ಮಾದಕವಾಗಿ ಕಾಣಿಸಿಕೊಳ್ಳಬಹುದು ಅಂತ ಅಭಿಮಾನಿಗಳೆಲ್ಲ ಕುತೂಹಲಗೊಂಡಿದ್ದರು.
ನಿರ್ದೇಶಕ ಚಂದ್ರು ಅವರೇ ಕೊಟ್ಟೊಂದು ಸುಳಿವಿನ ಪ್ರಕಾರವಾಗಿ ಹೇಳೋದಾದರೆ ಈ ಚಿತ್ರದಲ್ಲಿ ರಚಿತಾ ಹಿಂದೆಂದೂ ಕಂಡಿರದಂಥಾ ಹಾಟ್ ಲುಕ್ಕಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದೀಗ ರಚಿತಾ ಕುಣಿಯಲಿರೋ ಒಂದು ಹಾಡನ್ನು ಚಿತ್ರೀಕರಿಸಿಕೊಳ್ಳಲು ಚಂದ್ರು ತಯಾರಿ ನಡೆಸಿದ್ದಾರೆ. ಕಿರಣ್ ಸಂಗೀತ ನಿರ್ದೇಶನ ಮಾಡಿರೋ ಈ ಹಾಡಿನಲ್ಲಿ ಡಿಂಪಲ್ ಕ್ವೀನ್ ಅಭಿಮಾನಿಗಳನ್ನೆಲ್ಲ ಹುಚ್ಚೆಬ್ಬಿಸುವಂತೆ ಕಾಣಿಸಲಿದ್ದಾರೆಂದು ನಿರ್ದೇಶಕರು ಸುಳಿವು ಕೊಟ್ಟಿದ್ದಾರೆ! ಇದನ್ನೂ ಓದಿ: ಸಿಂಗಲ್ ಪೀಸಲ್ಲಿ ಐ ಲವ್ ಯೂ ಅಂದ್ರು ಉಪ್ಪಿ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv